ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ ನೂತನ ಗೃಹರಕ್ಷಕರ ನೇಮಕಾತಿ

(ನ್ಯೂಸ್‌ ಕಡಬ) newskadaba.com ನವದೆಹಲಿ, ಫೆ. 19. ದ.ಕ. ಜಿಲ್ಲಾ ಗೃಹರಕ್ಷಕ ದಳದ ಪೊಲೀಸ್ ಅಧೀಕ್ಷಕರು ಮತ್ತು ಪೋಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಘಟಕಗಳಿಗೆ ಚುನಾವಣಾ ಪೂರ್ವಸಿದ್ಧತಾ ತಯಾರಿ ಸಲುವಾಗಿ 25 ಗೃಹರಕ್ಷಕರನ್ನು ಸಿ ಫಾರಂ ನೀಡಿ ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ  ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಮಾತನಾಡಿ,  ಶಿಸ್ತುಬದ್ಧವಾಗಿ  ಇಲಾಖಾ ನಿಯಮಾನುಸಾರ ಸಮವಸ್ತ್ರ ಧರಿಸಿ ಹಾಗೂ ಜವಾಬ್ದಾರಿಯುತವಾಗಿ  ಕಾನೂನು ಸುವ್ಯವಸ್ಥೆ ಕರ್ತವ್ಯ ಮಾಡುವಂತೆ ಸೂಚಿಸಿದರು. ಮುಂಬರುವ ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದರು. 10 ದಿನಗಳ ಮೂಲತರಬೇತಿ ಶಿಬಿರವನ್ನು ಆಯೋಜಿಸಲಾಗುವುದು. ಸದರಿ ತರಬೇತಿ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ, ಸಂಚಾರಿ ನಿಯಂತ್ರಣ, ಮೂಲ ಅಗ್ನಿಶಮನ ತರಬೇತಿ, ರೈಫಲ್ ಡ್ರಿಲ್ ತರಬೇತಿ ಮುಂತಾದ ಸಮಗ್ರ ತರಬೇತಿಗಳನ್ನು ನೀಡಲಾಗುವುದು ಎಂದು ವಿವರಿಸಿದರು. ಸಮವಸ್ತ್ರವನ್ನು ಎಲ್ಲೂ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಿದರು. ಮಂಗಳೂರು ಘಟಕಾಧಿಕಾರಿ ಶ್ರೀ  ಮಾರ್ಕ್ ಶೆರಾರವರು ಹೊಸದಾಗಿ ನೇಮಕಗೊಂಡ ಗೃಹರಕ್ಷಕರಿಗೆ  ಇಲಾಖಾ ನಿಯಮಗಳ ಬಗ್ಗೆ ಮಾಹಿತಿ ನೀಡಿ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ  ಉಳ್ಳಾಲ ಘಟಕಾಧಿಕಾರಿ ಶ್ರೀ ಸುನಿಲ್ ಉಪಸ್ಥಿತರಿದ್ದರು.

Also Read  ಕುಕ್ಕೆ ಸುಬ್ರಹ್ಮಣ್ಯ: ನೂತನ "ಬ್ರಹ್ಮ" ರಥಕ್ಕೆ ಇಂದು ಒಂದು ವರುಷದ ಸಂಭ್ರಮ

error: Content is protected !!
Scroll to Top