ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ, ಬೆದರಿಸಿ ನಗ-ನಗದು ದೋಚಿದ ಕಳ್ಳರು…!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ. 16. ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಮಾರಕಾಯುಧವನ್ನಿಟ್ಟು ಬೆದರಿಸಿ ನಾಲ್ವರು ಅಪರಿಚಿತರ ತಂಡವೊಂದು ಮನೆಯಲ್ಲಿದ್ದ ಸುಮಾರು 5 ಲಕ್ಷ ರೂ. ನಗದು ಹಾಗೂ 30 ಗ್ರಾಂ. ನ ಮಾಂಗಲ್ಯ ಸರವನ್ನು ಸುಲಿಗೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ನಡೆದಿದೆ.

ಹೆಬ್ಬಾರಟ್ಟಿ ಅನಂತ ಹೆಬ್ಬಾರ್ ಎಂಬವರ ಮನೆಗೆ ಗುರುವಾರದಂದು ರಾತ್ರಿ ನಾಲ್ವರು ಅಪರಿಚಿತ ಯುವಕರ ತಂಡವೊಂದು ದಾಳಿ ನಡೆಸಿ, ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಮನೆಯಲ್ಲಿದ್ದ ನಗ-ನಗದು ದೋಚಿದ್ದಲ್ಲದೇ, ತಡೆಯಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬವರಿಗೂ ಕಳ್ಳರು ಹ ಆಯುಧದಿಂದ ಗಂಭೀರ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಾರ್ಮಿಕ ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದ ಜನ ಸೇರುತ್ತಿದ್ದಂತೆ ಕಳ್ಳರ ಪೈಕಿ ಮೂವರು ಕಾರಿನಲ್ಲಿ ಪರಾರಿಯಾದರೆ, ಇನ್ನೋರ್ವ ಅರಮನೆ ತಲಗೂರು ಎಂಬ ಗ್ರಾಮದ ಅರಣ್ಯದಲ್ಲಿ ಅವಿತು ಕೂತಿದ್ದು, ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ವರುಣಾರ್ಭಟಕ್ಕೆ ನಟ ಜಗ್ಗೇಶ್ ಕಾರು ಮುಳುಗಡೆ.!

error: Content is protected !!
Scroll to Top