ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಅರಂತೋಡು, ಫೆ. 15. ಸಂವಿಧಾನ ಪೀಠಿಕೆಯ ಆಶಯ ಮತ್ತು ಮೌಲ್ಯಗಳನ್ನು ಸ್ತಬ್ದ ಚಿತ್ರದ ಮೂಲಕ ಜನರಿಗೆ ತಿಳಿಸಲು ಸಂವಿಧಾನ ಜಾಥಾವು ಫೆ. 17 ರಂದು ಅಪರಾಹ್ನ 3 ಗಂಟೆಗೆ ಆಗಮಿಸುವ ಸಂದರ್ಭದಲ್ಲಿ ಜಾಥಾವನ್ನು ಅದ್ಧೂರಿಯಾಗಿ ಸ್ವಾಗತಿಸುವ ಸಲುವಾಗಿ ರೂಪು ರೇಶೆಗಳ ಬಗ್ಗೆ ಚರ್ಚಿಸಲು ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಪೂರ್ವಭಾವಿ ಸಭೆಯು ಬುಧವಾರದಂದು ನಡೆಯಿತು.


ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಅರ್ ಮಾತನಾಡಿ, ಸಂವಿಧಾನ ಜಾಗ್ರತಿ ಜಾಥಾ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಅಗತ್ಯ ಸಹಕಾರ ನೀಡಲು ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳು ಭಾಗವಹಿಸಿ ಜಾಥಾದ ಯಶಸ್ವಿಗೆ ಸಹಕರಿಸಲು ಕೋರಿದರು. ಅಲ್ಲದೇ ಸಂಪಾಜೆಯಿಂದ ಆಗಮಿಸುವ ಸಂವಿಧಾನ ಜಾಥಾವು ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಲಡ್ಕದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾರಾರ್ಪಣೆ ಮಾಡಿ ವಾಹನ ಜಾಥಾದೊಂದಿಗೆ ಸ್ವಾಗತಿಸಲು ನಿರ್ಧರಿಸಲಾಯಿತು. ಮಸೀದಿಯ ಸಮೀಪ ಅರಂತೋಡು ಗ್ರಾಮ ಪಂಚಾಯತ್ ವಠಾರದವರೆಗೆ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ಗ್ರಾಮ ಪಂಚಾಯತ್ ವಠಾರದಲ್ಲಿ ಸಮಾಪ್ತಿಗೊಂಡು ಸಮಾವೇಶ ಮಾಡುವುದೆಂದು ನಿರ್ಧರಿಸಲಾಯಿತು ಮತ್ತು ಸಂವಿಧಾನ ವೈಶಿಷ್ಟ್ಯಗಳ ಬಗ್ಗೆ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಲು ತೀರ್ಮಾನಿಸಲಾಯಿತು. ಚರ್ಚೆಯಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ, ಕೆ.ಆರ್ ಪದ್ಮನಾಭ ಕುರಂಜಿ, ಅಶ್ರಫ್ ಗುಂಡಿ ಹಾಗೂ ತೀರ್ಥರಾಮ ಅಡ್ಕಬಳೆ ಭಾಗವಹಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭವಾನಿ ಚಿಟ್ಟನ್ನೂರ್, ಮಾಜಿ ಉಪಾಧ್ಯಕ್ಷೆ ಶ್ವೇತಾ ಅರಮನೆಗಾಯ, ಸದಸ್ಯ ರವೀಂದ್ರ ಪಂಜಿಕೋಡಿ, ತಾಜುದ್ದೀನ್ ಅರಂತೋಡು, ತಿಮ್ಮಯ್ಯ ಮೆತ್ತಡ್ಕ, ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರ್ತಿ ಸುಮತಿ ಅಡ್ಕಬಳೆ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಮಂಜುಳಾ ಮೊದಲಾದವರು ಭಾಗವಹಿಸಿದರು.

Also Read  ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ಪ್ರಕರಣ - ಉಡುಪಿಗೆ ಸಿಐಡಿ ತಂಡ ಭೇಟಿ

error: Content is protected !!
Scroll to Top