ಕಡಬ ಕೇಂದ್ರ ಜುಮಾ ಮಸೀದಿಯಲ್ಲಿ ಇಂದು ಉರೂಸ್ ಸಮಾರೋಪ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಇಲ್ಲಿನ ಕೇಂದ್ರ ಜುಮಾ ಮಸೀದಿಯ ಹಝ್ರತ್ ಶೈಖ್ ಅಬ್ದುಲ್ ಖಾದಿರ್ ಷಾ ವಲಿಯುಲ್ಲಾಹಿ ದರ್ಗಾ ಶರೀಫ್ ಹಾಗೂ ಶುಹದಾಕಳ್ ರವರ ಉರೂಸ್ ಸಮಾರಂಭವು ಫೆಬ್ರವರಿ 02 ರಂದು ಆರಂಭಗೊಂಡಿದ್ದು, ಇಂದು (ಫೆಬ್ರವರಿ 04) ಸಮಾರೋಪ ಸಮಾರಂಭ ನಡೆಯಲಿದೆ.

ಇಂದು ಮಗ್ರಿಬ್ ನಮಾಝಿನ ಬಳಿಕ ಬಾಜಿನಡಿ ಗೈಬಾನ್ ಷಾ ವಲಿಯುಲ್ಲಾಹಿ ದರ್ಗಾದ ಬಳಿಯಿಂದ ಕೇಂದ್ರ ಜುಮಾ‌ ಮಸೀದಿಯ ವರೆಗೆ ಸಂದಲ್ ಮೆರವಣಿಗೆ ನಡೆಯಲಿದ್ದು, ರಹ್ಮಾನಿಯಾ ಟೌನ್ ಜುಮಾ‌ ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿಯವರು ದುವಾ ಆಶೀರ್ವಚನಗೈಯಲಿದ್ದಾರೆ. ಬಳಿಕ ಸೌಹಾರ್ದ ಸಂಗಮ ನಡೆಯಲಿದ್ದು, ರಾತ್ರಿ 9 ಗಂಟೆಯಿಂದ ಉರೂಸ್ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ಸಮದ್ ಸಖಾಫಿ ಜೋಗಿಬೆಟ್ಟು, ಉಪ್ಪಿನಂಗಡಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಕೇಪು ವಹಿಸಲಿದ್ದಾರೆ. ಅಸ್ಸಯ್ಯಿದ್ ಮಶ್’ಹೂರ್ ಮುಲ್ಲಕೋಯ ತಂಙಳ್ ಮುಖ್ಯ ಪ್ರಭಾಷಣಗೈಯಲಿದ್ದು, ಅಸ್ಸಯ್ಯಿದ್ ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಕೇರಳ ದುವಾ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಜುಮಾ‌ ಮಸೀದಿಯ ಖತೀಬರಾದ ಅಬ್ದುಲ್ ರಶೀದ್ ಸ’ಅದಿ ಸ್ವಾಗತಗೈಯಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಡಬ ಪೊಲೀಸ್ ಠಾಣೆಯಲ್ಲಿ ದೊಡ್ಡ ಸ್ಫೋಟ ► ತಪ್ಪಿದ ಭಾರೀ ಅನಾಹುತ

error: Content is protected !!
Scroll to Top