ಹನುಮಗಿರಿ ಮೇಳದ ಕಲಾವಿದನಿಗೆ ಪಟ್ಲ ಯಕ್ಷಾಶ್ರಯ ವತಿಯಿಂದ ಮನೆ ನಿರ್ಮಾಣ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.04. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು
ಹನುಮಗಿರಿಮೇಳ ದ ಕಲಾವಿದ ಶ್ರೀ ರೂಪೇಶ್ ಆಚಾರ್ಯ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ವಿಟ್ಲ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತಿರದಲ್ಲಿ ನಿರ್ಮಾಣಗೊಂಡಿರುವ ‘ಶ್ರೀದೇವಿ ನಿಲಯ’ ನೂತನ ಮನೆಯ ಕೀಲಿಕೈ ಹಸ್ತಾಂತರವು ಇಂದು ಬೆಳಿಗ್ಗೆ ಸಂಪನ್ನಗೊಂಡಿತು.

ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರು ಹಾಗೂ ನೂತನಮನೆಯ ನಿರ್ಮಾಣಕ್ಕೆ ಕಾರಣೀಕರ್ತರಾದ ದಾನಿ ಅಶೋಕ್ ಶೆಟ್ಟಿ ಬೆಳ್ಳಾಡಿಯವರು ಭಾಗವಹಿಸಿ ಶುಭಹಾರೈಸಿದರು. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪೂವಪ್ಪ ಶೆಟ್ಟಿ ಅಳಿಕೆ ಹಾಗೂ ಪದಾಧಿಕಾರಿಗಳಾದ ಅರವಿಂದ ರೈ ಮೂರ್ಜೆಬೆಟ್ಟು ಹಾಗೂ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಉಪಸ್ಥಿತರಿದ್ದರು. ಮನೆಯವರ ವತಿಯಿಂದ ನಿರ್ಮಾತೃ ಅಶೋಕ್ ಶೆಟ್ಟಿ ಬೆಳ್ಳಾಡಿಯವರಿಗೆ ಹಾಗೂ ವಿಟ್ಲ ಘಟಕದ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಗೌರವ ಸಮರ್ಪಿಸಿದರು. ನಂತರ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಘಟಕದ ವತಿಯಿಂದ ರೂಪೇಶ್ ಆಚಾರ್ಯ ಅವರ ಮನೆಯವರನ್ನು ಗೌರವಿಸಲಾಯಿತು.

Also Read  ಕಡಬ: ನಾಳೆ(ಅ.21) 'ನ್ಯೂ ಕೆನರಾ ಫರ್ನೀಚರ್ಸ್' ಶುಭಾರಂಭ ➤ ಉದ್ಘಾಟನೆಯ ಪ್ರಯುಕ್ತ ವಿಶೇಷ ಆಫರ್

error: Content is protected !!
Scroll to Top