ಕಡಬ ಕೇಂದ್ರ ಜುಮಾ ಮಸೀದಿಯಲ್ಲಿ ಉರೂಸ್ ಸಮಾರಂಭ – ಇಂದು ಬೃಹತ್ ಬುರ್ದಾ ಮಜ್ಲಿಸ್ ಹಾಗೂ ನಾತ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಇಲ್ಲಿನ ಕೇಂದ್ರ ಜುಮಾ ಮಸೀದಿಯ ಹಝ್ರತ್ ಶೈಖ್ ಅಬ್ದುಲ್ ಖಾದಿರ್ ಷಾ ವಲಿಯುಲ್ಲಾಹಿ ದರ್ಗಾ ಶರೀಫ್ ಹಾಗೂ ಶುಹದಾಕಳ್ ರವರ ಉರೂಸ್ ಸಮಾರಂಭವು ಫೆಬ್ರವರಿ 02 ರಂದು ಆರಂಭಗೊಂಡಿದ್ದು, ಇಂದು (ಫೆಬ್ರವರಿ 03) ಬೃಹತ್ ಬುರ್ದಾ ಮಜ್ಲಿಸ್ ಹಾಗೂ ನಾತ್ ಕಾರ್ಯಕ್ರಮ ನಡೆಯಲಿದೆ.

ಲದಲ್ ಹಬೀಬಿ ಬುರ್ದಾ ಇಖ್ವಾನ್ ಮಲಪ್ಪುರಂ ಕೇರಳ ಬುರ್ದಾ ಮಜ್ಲಿಸ್ ನಡೆಸಿಕೊಡಲಿದ್ದು, ಹಝ್ರತ್ ಹನೀಫ್ ರಝ ಖಾದಿರಿ ಬಿಜಾಪುರ್, ಮುಹಮ್ಮದ್ ನಬೀಲ್ ರಾಝಾ ಬರಕಾತಿ ಹಾಗೂ ಸಿರಾಜ್ ಉಳ್ಳಾಲ ನಾತ್ ನಡೆಸಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುವಾ ಆಶೀರ್ವಚನ ನೀಡಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ

error: Content is protected !!
Scroll to Top