ರಾಜ್ಯಮಟ್ಟದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ನಿಹಾರಿಕಾ ಹಾಗೂ ಶಿವಾನಿ ಡಿ.ಎ. ಕಡಬ ತಾಲೂಕಿಗೆ ಪ್ರಥಮ – ಸೈಂಟ್ ಜೋಕಿಮ್ಸ್ ಮತ್ತು ಸೈಂಟ್ ಆ್ಯನ್ಸ್ ಗೆ 100% ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಜ.30. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಕಳೆದ ನವೆಂಬರ್ ತಿಂಗಳಲ್ಲಿ ನಡೆಸಿದ ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್ ಚಿತ್ರಕಲಾ ಪರೀಕ್ಷೆಗೆ ಕಡಬದ ಸೈಂಟ್ ಜೋಕಿಮ್ಸ್ ಪ್ರೌಢಶಾಲೆ ಮತ್ತು ಸೈಂಟ್ ಆ್ಯನ್ಸ್ ಪ್ರೌಢಶಾಲೆಯ 73 ವಿದ್ಯಾರ್ಥಿಗಳು ಹಾಜರಾಗಿದ್ದು, 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ‌ ಶೇಕಡಾ 100 ಫಲಿತಾಂಶ ಬಂದಿರುತ್ತದೆ.

ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಿಹಾರಿಕ ಮತ್ತು ಶಿವಾನಿ ಡಿ.ಎ. ಕಡಬ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹೈಯರ್ ಗ್ರೇಡ್ ವಿಭಾಗ: ನಿಹಾರಿಕಾ 491, ಮಧುರ 458, ಶ್ರದ್ಧಾ ಪಿ. 457, ನಿವೇದಿತಾ ಪಿ 456, ಅನುಶ್ರೀ ಎಂ ಡಿ 454, ಭವಿಷ್ ಬಿ ಎಂ 446, ಸಾನ್ವಿ ಕೆ ಆರ್ 442, ಸಾನಿಧ್ಯ ರೈ 442, ಗೌತಮ್ ಎಸ್ 433, ಸೋಹನ್ ಹೆಬ್ಬಾರ್ 428, ಉದಿತ್ ರೈ 420, ಗೌತಮ್ ಕೆ ಜೆ 420 ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ ಸಾನ್ವಿ ಎನ್ ಕೆ 419 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ಲೋವರ್ ಗ್ರೇಡ್ ವಿಭಾಗ: ಶಿವಾನಿ ಡಿ.ಎ 473, ಅಮೃತ ಪಿ ಎಸ್ 451, ಗಗನ್ ಎಸ್ಎನ್ 448, ಲವ್ಯಶ್ರೀ440, ಇಸ್ರಾ ಶೇಕ್433, ಋತಿಕ್ 421, ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Also Read  ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ತರಕಾರಿ ಟೆಂಪೋ ➤ ಸ್ಥಳದಲ್ಲೇ ಇಬ್ಬರ ದುರ್ಮರಣ..!!


ಸೈಂಟ್ ಜೋಕಿಮ್ಸ್ ಪ್ರೌಢಶಾಲೆ ಹೈಯರ್ ಗ್ರೇಡ್ ವಿಭಾಗ: ಪುಣ್ಯಶ್ರೀ 450, ಕೆ.ರಶ್ಮಿತಾ 441, ಮೋಕ್ಷಾ 436, ಸಂಜನಾ 432, ಸಬಿನಾ 430, ಮೊಹಮ್ಮದ್ ಆಸಿಮ್ 427, ಅದ್ ನಾನ್ 427, ಸಫೀದ 426, ರಾಬಿಯ ಹುಸ್ನ 426, ಶ್ರಾವ್ಯ 424, ಆಯಿಶತ್ ಮಹಮ್ಮದ್ ಮಿದ್ ಲಾಜ್421, ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ ಆಯಿಷತ್ ಸುರಯ್ಯ 417 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Also Read  Ставки На Спорт Онлайн Официальный Сайт Букмекерской Конторы Betboo

ಲೋವರ್ ಗ್ರೇಡ್: ಚೈತನ್ಯ 449, ವಂಶಿ ಬಿ.ಎಂ 440, ತಸ್ರೀಫ 434, ಅನುಶ್ರೀ 431, ವರ್ಷಿತಾ 428, ಭವಿಷ್ ಬಿ 426, ಎಲ್ಲ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ ಫಾತಿಮಾತ್ ನಾಜಿಯಾ 417 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯ ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ಇವರು ತರಬೇತಿಯನ್ನು ನೀಡಿದ್ದಾರೆ. ಸಂಸ್ಥೆಯ ಸಂಚಾಲಕರಾದ ವಂದನೀಯ ಫಾ. ಪ್ರಕಾಶ್ ಪೌಲ್ ಡಿಸೋಜಾ , ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ.ಅಮಿತ್ ಪ್ರಕಾಶ್ ರೊಡ್ರಿಗಸ್ ಹಾಗೂ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯನಿ ಪೂರ್ಣಿಮಾ ಪಿ. ಅಭಿನಂದಿಸಿದ್ದಾರೆ.

error: Content is protected !!
Scroll to Top