ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ – ಬಿಜೆಪಿಯ ಕೈ ಹಿಡಿದು ಮಾತೃ ಪಕ್ಷಕ್ಕೆ ಘರ್ ವಾಪ್ಸಿ ಆದ ಜಗದೀಶ್ ಶೆಟ್ಟರ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ.25. ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುರುವಾರದಂದು ಮಾತೃ ಪಕ್ಷಕ್ಕೆ ಘರ್ ವಾಪ್ಸಿ ಆಗಿದ್ದಾರೆ.

ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹದ ನಡುವೆ ಇಂದು ಹಠಾತ್ ನವದೆಹಲಿಯ ಬಿಜೆಪಿ ಕಛೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್ ನಾಯಕರನ್ನು ಚಿಂತಾಕ್ರಾಂತರನ್ನಾಗಿಸಿದೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಜಗದೀಶ್ ಶೆಟ್ಟರ್ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆನ್ನುವುದು ನನ್ನ ಅಸೆಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ದೇಶದ ಅಭಿವೃದ್ಧಿಗೆ ಕಾರಣೀಭೂತರಾದ ಮೋದಿಯವರ ಅಭಿವೃದ್ಧಿ ಕೆಲಸದ ಮೂಲಕ ಭಾರತ ಮುನ್ನಡೆಯಬೇಕು ಎಂಬುದು ನನ್ನ ಅಸೆಯಾಗಿದೆ. ಹಾಗಾಗಿ ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ.

Also Read  ಹಿಟ್ ಚಿತ್ರಗಳ ನಿರ್ದೇಶಕ ವಿಜಯ್ ರೆಡ್ಡಿ ವಿಧಿವಶ

 

error: Content is protected !!
Scroll to Top