ಅಯೋಧ್ಯೆ ರಾಮ ಮಂದಿರ ಉದ್ಘಾಟನೆ – ಭದ್ರತಾ ದೃಷ್ಟಿಯಿಂದ 10,000 ಸಿಸಿಟಿವಿ ಕ್ಯಾಮೆರಾ, ಡ್ರೋನ್‌ಗಳು ಅಳವಡಿಕೆ

(ನ್ಯೂಸ್ ಕಡಬ) newskadaba.com ಲಕ್ನೋ, . 13. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮವು ಜನವರಿ 22ರಂದು ನಡೆಯಲಿದ್ದು, ಈ ಹಿನ್ನಲೆ ಭದ್ರತಾ ದೃಷ್ಟಿಯಿಂದ ಡ್ರೋನ್‌ಗಳು ಮತ್ತು 10,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಸಂದರ್ಭ, ಈ ಪ್ರದೇಶದಲ್ಲಿ ಯಾವುದೇ ಅಪರಿಚಿತ ಡ್ರೋನ್ ಹಾರಾಟ ಕಂಡುಬಂದರೂ ಅದರ ಮೇಲೆ ನಿಯಂತ್ರಣ ಸಾಧಿಸಲು ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ ಎಂದು ಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಇನ್ನು ಅಯೋಧ್ಯೆಯ ಸುತ್ತಮುತ್ತಲೂ 10,000 ಸಿಸಿಟಿವಿ ಅಳವಡಿಸಲಾಗುತ್ತಿದ್ದು, ಇದರ ಜೊತೆಗೆ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಕೂಡ ಪೊಲೀಸರಿಗೆ ನೆರವಾಗುವ ದೃಷ್ಟಿಯಿಂದ ಅಳವಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

Also Read  ಅಧಿಕ ಉಪ್ಪಿನ ಬಳಕೆಯಿಂದ ದೂರವಿರಿ- ಹೃದಯವನ್ನು ಕಾಪಾಡಿ

error: Content is protected !!
Scroll to Top