ಪತ್ನಿಗೆ ಕಿರುಕುಳ, ಪತಿ ವಿರುದ್ದ ಪರ್ರಕಣ ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 13. ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಆಕೆಗೆ ಹಲ್ಲೆ ನಡೆಸಿ 33 ಪವನ್‌ ಚಿನ್ನ ದೋಚಿದ ಪ್ರಕರಣವು ಕಳೆದ ಡಿ. 30ರಂದು ನಡೆದಿದ್ದು, ಪ್ರಸ್ತುತ ಪತ್ನಿ ನೀಡಿರುವ ದೂರಿನಂತೆ  ಪತಿ ಹಾಗೂ 6 ಮಂದಿ ಆತನ ಸಂಬಂಧಿಕರ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪುದು ಗ್ರಾಮ ನಿವಾಸಿ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಪತಿ ಉಮ್ಮರ್‌ ಫಾರೂಕ್‌, ಆತನ ಸಹೋದರರಾದ ಮುಸ್ತಾಫಾ, ರಿಯಾಜ್‌, ಮೊಹಮ್ಮದ್‌ ಆರೋಪಿಗಳಾಗಿದ್ದಾರೆ. ದೂರುದಾರ ಮಹಿಳೆ ನೀಡಿದ ದೂರಿನ ಪ್ರಕಾರ, ಸುಮಾರು 14 ವರ್ಷಗಳ ಹಿಂದೆ ಆಕೆಗೆ ಉಮ್ಮರ್‌ ಫಾರೂಕ್‌ ಜತೆ ವಿವಾಹವಾಗಿದ್ದು, ಈ ವೇಳೆ 5 ಲಕ್ಷ ರೂ. ಹಾಗೂ 63 ಪವನ್‌ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಬಳಿಕ ಆರೋಪಿ ಪತಿ ಹೆಚ್ಚಿನ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಆಕೆ ನಂದಾವರದಲ್ಲಿ ಫ್ಲಾಟ್‌ ಖರೀದಿಸಿ ವಾಸವಾಗಿದ್ದರು. ಆರೋಪಿ ಪತಿಯು ಡಿ. 30ರಂದು ಆಕೆಯ ಫ್ಲಾಟ್‌ಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರಕ್ತ ಬರುವಂತೆ ಹೊಡೆದು ನೀನು ಬೇಡ, ಬೇರೆ ಮದುವೆಯಾಗುವುದಾಗಿ ಹೇಳಿ ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಬಂಟ್ವಾಳ ನಗರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸ್ಕೌಟ್ಸ್-ಗೈಡ್ಸ್ ನಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ- ಡಾ. ಆನಂದ್

error: Content is protected !!
Scroll to Top