ಇಂದು (ಫೆ.12) ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ಖ್ ಹುದವಿ ಆತೂರಿಗೆ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ಆತೂರು ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಆತೂರು ಶಾಖಾ ವತಿಯಿಂದ ಇಂದು (ಫೆ.12) ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ಅಂತರಾಷ್ಟ್ರೀಯ ವಾಗ್ಮಿ ಬಹು| ಉಸ್ತಾದ್ ಸಿಂಸಾರುಲ್ ಹಖ್ಖ್ ಹುದವಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಬಹು| ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೋಟು ದುಃಆ ನೆರವೇರಿಸಲಿದ್ದಾರೆ. ದ.ಕ ಖಾಝಿ ತ್ವಾಖ ಅಹಮ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆತೂರು ಬಿ.ಜೆಎಂ ಖತೀಬರಾದ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶೈಖುನಾ ಡಾ| ಕೆ.ಎಂ.ಶಾಹ್ ಉಸ್ತಾದ್ ಆತೂರುರವರು ದುಃಆ ನೆರವೇರಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಉಪಾಧ್ಯಕ್ಷರಾದ ಅಲ್ಹಾಜಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಗಂಡಿಬಾಗಿಲು ಕೆ.ಜೆಎಂ ಖತೀಬರಾದ ಅಸ್ಸಯ್ಯದ್ ಅನಸ್ ತಂಙಳ್ ಅಲ್ ಅಝ್ಹರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಳ್ಳಾಲ ಸಯ್ಯದ್ ಮದನಿ ಹಿಫಳ್ ಕಾಲೇಜಿನ ಪ್ರಿನ್ಸಿಪಾಲ್ ಹಾಫಿಳ್ ಝೈನ್ ಸಖಾಫಿ ಮುಖ್ಯ ಪ್ರಭಾಷಣ ಗೈಯಲಿದ್ದಾರೆ. ಕರ್ನಾಟಕ ರಾಜ್ಯ ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಅನೀಸ್ ಕೌಸರಿ, ದ.ಕ.ಜಿಲ್ಲೆ ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಇಸ್ಹಾಕ್ ಫೈಝಿ, ಉಪ್ಪಿನಂಗಡಿ ಎಂ.ಜೆ.ಎಂ ಖತೀಬರಾದ ಅಲ್ಹಾಜಿ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ್, ಆತೂರು ಎಂಜೆಎಂ ಖತೀಬರಾದ ಹನೀಫ್ ಫೈಝಿ ಉಪಸ್ಥಿತರಿರುವರು ಎಂದು ಆತೂರು ಕ್ಲಸ್ಟರ್ ಅಧ್ಯಕ್ಷ ಎಸ್ಕೆಎಸ್ಎಸ್ಎಫ್ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಸಿದ್ದೀಖ್ ನೀರಾಜೆ, ಬಿಜೆಎಂ ಅಧ್ಯಕ್ಷ ಬಿ.ಕ ಅಬ್ದುಲ್ ರಝಾಕ್, ಆತೂರು ಬದ್ರಿಯಾ ಸ್ಕೂಲ್ ಅಧ್ಯಕ್ಷ ಪಿ.ಪುತ್ತುಕುಂಞ ಹಾಜಿ ಪಿಲಿಕುಡೇಲ್ ತಿಳಿಸಿದ್ದಾರೆ.

Also Read  ಡಿ ವರ್ಗ ಸರಕಾರಿ ನೌಕರರ ಸಂಘ ➤ನೂತನ ಅಧ್ಯಕ್ಷರಾಗಿ ಚಂದ್ರಶೇಖರ್

error: Content is protected !!
Scroll to Top