ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್‍ ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ಶುಕ್ರವಾರದಂದು ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅಧೀಕ್ಷಕರ ವ್ಯಾಪ್ತಿಯಲ್ಲಿ ಬರುವ ಠಾಣೆಗಳಿಗೆ ನಿಯೋಜಿಸುವ ಗೃಹರಕ್ಷಕರ ಪಟ್ಟಿಯನ್ನು ನೀಡುವ ಕುರಿತು, ಕವಾಯತು ಹಾಜರಾತಿ ಪಟ್ಟಿಯನ್ನು ಮುಂದಿನ ತಿಂಗಳ 5ನೇ ತಾರೀಖಿನೊಳಗೆ ನೀಡುವ ಕುರಿತು, ಮುಂಬರುವ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಗೃಹರಕ್ಷಕರ ಕ್ಷೇಮಾಭಿವೃದ್ದಿ ನಿಧಿಗೆ ವಂತಿಗೆಯನ್ನು ಕಟ್ಟಲು ಬಾಕಿ ಇರುವ ಗೃಹರಕ್ಷಕರ ಬಗ್ಗೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಚರ್ಚಿಸಲಾಯಿತು. ಮೂರು ವರ್ಷಗಳನ್ನು ಮೀರಿದ ಗೃಹರಕ್ಷಕರು ನವೀಕರಣ ಮಾಡಿಸಲು ಸೂಚಿಸಲಾಯಿತು, ಸಮವಸ್ತ್ರಗಳನ್ನು ಪಡೆಯಲು  ಬಾಕಿ ಇರುವ ಗೃಹರಕ್ಷಕರು ಪಡೆದುಕೊಳ್ಳುವ ಬಗ್ಗೆ  ಹಾಗೂ ಗೃಹರಕ್ಷಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು. ಕಛೇರಿ ಅಧೀಕ್ಷಕರಾದ ಶ್ರೀ ಗೋಪಿನಾಥ್ ಬಿ.ಎನ್. ಅವರು ಸ್ವಾಗತ ಭಾಷಣ ಮಾಡಿದರು. ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 15 ಘಟಕಗಳ ಘಟಕಾಧಿಕಾರಿಗಳಾದ ಶ್ರೀ ಮಾರ್ಕ್‍ಶೇರ್, ಸೀನಿಯರ್ ಪ್ಲಟೂನ್ ಕಮಾಂಡರ್ ಮಂಗಳೂರು ಘಟಕ, ಶ್ರೀ ಐತಪ್ಪ ಘಟಕಾಧಿಕಾರಿ ಬಂಟ್ವಾಳ ಘಟಕ, ಶ್ರೀ ಅಭಿಮನ್ಯು ರೈ ಘಟಕಾಧಿಕಾರಿ ಪುತ್ತೂರು ಘಟಕ, ಶ್ರೀ ತೀರ್ಥೇಶ್ ಘಟಕಾಧಿಕಾರಿ ಕಡಬ ಘಟಕ, ಪ್ರಭಾರ ಘಟಕಾಧಿಕಾರಿಗಳಾದ ಶ್ರೀ ಸುನಿಲ್ ಕುಮಾರ್, ಉಳ್ಳಾಲ ಘಟಕ, ಶ್ರೀ ಲೋಕೇಶ್, ಮೂಲ್ಕಿ ಘಟಕ, ಶ್ರೀ ದಿನೇಶ್ ಉಪ್ಪಿನಂಗಡಿ ಘಟಕ, ಶ್ರೀ ಹರಿಶ್ಚಂದ್ರ  ಸುಬ್ರಹ್ಮಣ್ಯ ಘಟಕ, ಶ್ರೀ ಚಾಕೋ, ಬೆಳ್ತಂಗಡಿ ಘಟಕ, ಶ್ರೀ ಶಿವಪ್ಪ ನಾಯ್ಕ ಪಣಂಬೂರು ಘಟಕ, ಶ್ರೀ ಸಂಜೀವ ವಿಟ್ಲ ಘಟಕ ಮತ್ತು ಶ್ರೀ ಪಾಂಡುರಾಜ ಮೂಡಬಿದ್ರಿ ಘಟಕ ಇವರುಗಳು ಉಪಸ್ಥಿತರಿದ್ದರು.

Also Read  ಇಂದು ಸಂಜೆ 4ಕ್ಕೆ ಮೋದಿ ಭಾಷಣ ➤ ಎಲ್ಲರ ಚಿತ್ತ ಪ್ರಧಾನಿಯತ್ತ

error: Content is protected !!
Scroll to Top