ರಾಜ್ಯಮಟ್ಟದ ವೃತ್ತಿಪರ ಕ್ರೀಡಾಕೂಟ – ಪ್ರಥಮ ಸ್ಥಾನ ಪಡೆದ ಗೃಹರಕ್ಷಕಿಯರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12. ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ ಬೆಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕಿಯರಾದ ಶಕೀಲಾ, ಬಂಟ್ವಾಳ ಘಟಕ ಮತ್ತು ಭವ್ಯಶ್ರೀ, ಮಂಗಳೂರು ಘಟಕ ಇವರು 800 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.  ಇವರಿಗೆ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಇವರು ಅಭಿನಂದಿಸಿ, ಶಾಲು ಹೊದಿಸಿ, ತಲಾ 1000/- ರೂ.  ನಗದು ಬಹುಮಾನವನ್ನು  ನೀಡಿ ಗೌರವಿಸಿದರು.

Also Read  ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸ್ಯಾನಿಟೈಸರ್ ವಿತರಣೆ

ಈ ಸಂದರ್ಭದಲ್ಲಿ ಸೀನಿಯರ್ ಪ್ಲಟೂನ್ ಕಮಾಂಡರ್ ಮಂಗಳೂರು ಘಟಕದ  ಘಟಕಾಧಿಕಾರಿ ಶ್ರೀ ಮಾರ್ಕ್‍ಶೇರಾ, ಸುನೀಲ್ ಕುಮಾರ್, ದಿವಾಕರ್, ಸಂತೋಷ್ ಜಾದವ್, ಸುರೇಖ, ನಂದಿನಿ, ಸಂಧ್ಯಾ  ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top