ಮಾರುಕಟ್ಟೆ ಮೌಲ್ಯ ದರಪಟ್ಟಿ ಪರಿಷ್ಕರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12. ನಗರದ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ದರಪಟ್ಟಿಯನ್ನು 2023ರ ಅಕ್ಟೋಬರ್ 1 ರಿಂದ ಪರಿಷ್ಕರಿಸಲಾಗಿದ್ದು, ಇದರಲ್ಲಿ ಕೆಲವು ಹತ್ತು ವರ್ಷಗಳ ಹಳೆಯ ಅಪಾರ್ಟ್‍ಮೆಂಟ್‍ಗಳು ಹಾಗೂ 500 ಚ.ಮೀಟರ್ ನಿವೇಶನದಲ್ಲಿ ನಿರ್ಮಿಸಿದ ಅಪಾರ್ಟ್‍ಮೆಂಟ್‍ಗಳಿಗೆ ಮೌಲ್ಯ ನಿಗದಿಪಡಿಸಲು ಬಿಟ್ಟು ಹೋಗಿರುತ್ತದೆ.

ಕೇಂದ್ರ ಮೌಲ್ಯ ಮಾಪನ ಸಮಿತಿಯು ಅಪಾರ್ಟ್‍ಮೆಂಟ್‍ಗಳಿಗೆ ಮೌಲ್ಯವನ್ನು ನಿಗದಿಪಡಿಸಿ ಉಪಸಮಿತಿ ಸಭೆಯಲ್ಲಿ ಅನುಮೋದಿಸಲಾಗಿದೆ. ಈ ಬಗ್ಗೆ ಪರಿಷ್ಕೃತ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ದರಪಟ್ಟಿಯನ್ನು ಕೇಂದ್ರೀಯ ಉಪನೋಂದಣಿ ಕಚೇರಿ, ಮಂಗಳೂರು ನಗರದ ಸೂಚನಾ ಫಲಕದಲ್ಲಿ ಸಾರ್ವಜನಿಕ ಆಕ್ಷೇಪಣೆಗಳಿಗಾಗಿ ಈಗಾಗಲೇ ಪ್ರಕಟಣೆಗೊಳಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಹದಿನೈದು ದಿನದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಹಿರಿಯ ಉಪನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸುಳ್ಯ : ಲಾಕ್ ಡೌನ್ ಮಧ್ಯೆಯೂ ಹೆಚ್ಚಿದ ಜನಸಂದಣಿ

error: Content is protected !!
Scroll to Top