ಭಾರತದ ಅತೀ ಉದ್ದದ ಸಮುದ್ರ ಸೇತುವೆ ಜ. 12ರಂದು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮುಂಬೈ, . 12. ಭಾರತದ ಅತೀ ಉದ್ದನೆಯ ಸಾಗರ ಸೇತುವೆಯನ್ನು ಪ್ರದಾನಿ ನರೇಂದ್ರ ಮೋದಿ ಅವರು ಜನವರಿ 12ರಂದು ಉದ್ಘಾಟಿಸಲಿದ್ದಾರೆ.

ಈ ಸೇತುವೆಯನ್ನು ದಕ್ಷಿಣ ಮುಂಬೈನಿಂದ ನವ ಮುಂಬೈವರೆಗೆ ಸಮುದ್ರದಲ್ಲಿ ನಿರ್ಮಿಸಲಾಗಿದ್ದು, ಇದು ಬರೋಬ್ಬರಿ 21.8 ಕಿಲೋ ಮೀಟರ್‌ ಉದ್ದದ ಸೇತುವೆಯಾಗಿದೆ. ಇದರಿಂದಾಗಿ ದಕ್ಷಿಣ ಮುಂಬೈನಿಂದ ನವ ಮುಂಬೈವರೆಗಿನ ಎರಡು ಗಂಟೆಗಳ ಪ್ರಯಾಣವನ್ನು ಇನ್ನು ಕೇವಲ 15-20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ ಎಂದು ವರದಿ ತಿಳಿಸಿದೆ. ಹೊಸ ಸೇತುವೆ ನಿರ್ಮಾಣದಿಂದಾಗಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ.

Also Read  ಪಹಣಿಗೆ ಆಧಾರ್ ಜೋಡಣೆ – ರೈತರಿಗೆ ಸೂಚನೆ

error: Content is protected !!
Scroll to Top