ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಯೋಧ್ಯೆಗೆ ಬೆಳ್ಳಿಯ ಪೂಜಾ ಸಾಮಗ್ರಿಗಳ ಸಮರ್ಪಣೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಜ. 11. ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀ ರಾಮ ಮಂದಿರ ನಿರ್ಮಾಣವಾಗಲಿದ್ದು, ಈ ಮೂಲಕ ಭಾರತೀಯರ ಅನೇಕ ವರ್ಷದ ಕನಸು ಹಾಗೂ ನಿರೀಕ್ಷೆಗಳು ಸಾಕಾರಗೊಂಡಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಈ ದಿನ ಭಾವನಾತ್ಮಕವಾಗಿ ಕೋಟ್ಯಂತರ ಭಕ್ತರ ಪಾಲಿಗೆ ಅವಿಸ್ಮರಣೀಯವಾಗಿದೆ. ಮಹತ್ಕಾರ್ಯದ ನೇತೃತ್ವ ವಹಿಸಿದ ದೇಶದ ಪ್ರಧಾನಿ ಮೋದಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲರನ್ನು ಅಭಿನಂದಿಸುತ್ತೇನೆ. ಶ್ರೀರಾಮನ ಸೇವೆಗಾಗಿ ಧರ್ಮಸ್ಥಳದಿಂದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಸಮರ್ಪಿಸುತ್ತಿದ್ದೇವೆ” ಎಂದಿದ್ದಾರೆ.

Also Read  ಅಪರಾದ ಚಟುವಟಿಕೆಗಳ ಮೇಲೆ ನಿಗಾ ➤ ನಗರಾಭಿವೃದ್ಧಿ ಸಚಿವ ಸೂಚನೆ

error: Content is protected !!
Scroll to Top