ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣ – ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 11.  ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಓರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.

ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳದ ಸಂದೀಪ್ ಎಂದು ಗುರುತಿಸಲಾಗಿದೆ. ಈತ ಜ.6ರಂದು ರಾತ್ರಿ ಬರಿಮಾರು ಗ್ರಾಮದ ಲಿಖಿತ್ ಕುಮಾರ್ ಎಂಬವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದನು. ಅಂದು ರಾತ್ರಿ ಊಟ ಮಾಡಿ ಮನೆಯವರೆಲ್ಲಾ 10:30ರ ಸುಮಾರಿಗೆ ಮಲಗಿದ್ದರು. ಲಿಖಿತ್ ರವರ ಭಾವ ಕೀರ್ತನ್ ಎಂಬವರು ರಾತ್ರಿ ಎದ್ದು ಹೊರ ಬಂದಾಗ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ ಬೈಕ್ ಬೆಂಕಿಯಿಂದ ಉರಿಯುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಕೀರ್ತನ್ ಮನೆಯವರನ್ನು ಎಬ್ಬಿಸಿದ್ದು, ಹೊರಗೆ ಬಂದು ನೋಡಿದಾಗ ಮನೆಯ ಶೆಡ್‍ನಲ್ಲಿದ್ದ ಲಿಖಿತ್ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಮನೆಯಿಂದ ತೆಗೆದುಕೊಂಡು ಹೋಗಿ ಉರಿಸಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಲಿಖಿತ್ ಅವರು ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಮತ್ತೇ ಭುಗಿಲೆದ್ದ ಹಿಂಸಾಚಾರ..! ➤ 40 ಕ್ಕೂ ಹೆಚ್ಚು ಉಗ್ರರ ಹತ್ಯೆ

error: Content is protected !!
Scroll to Top