ಹಲವು ಪ್ರಕರಣಗಳ ಆರೋಪಿ ನಕಲಿ ನ್ಯಾಯಾಧೀಶನ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, . 10. ನ್ಯಾಯಾಧೀಶನಂತೆ ನಟಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ ಹಲವು ಪ್ರಕರಣಗಳ ಆರೋಪಿಯೋರ್ವನ್ನು ಪೊಲೀಸರು ಬಂಧಿಸಿದ ಕುರಿತು ಕಾಸರಗೋಡಿನಿಂದ ವರದಿಯಾಗಿದೆ.

ಬಂಧಿತ ಆರೋಪಿಯನ್ನು ತಿರುವನಂತಪುರ ತೇನ್ನಲ ನಿವಾಸಿ ಶಮ್ನಾದ್ (42) ಎಂದು ಗುರುತಿಸಲಾಗಿದೆ. ಆರೋಪಿಯು ಜ. 08ರಂದು ನೀಲೇಶ್ವರ ಪೊಲೀಸ್ ಠಾಣೆಗೆ ಕರೆಮಾಡಿ ಪತ್ತನಂತಿಟ್ಟದ ನ್ಯಾಯಾಧೀಶರ ಕಾರು ದಾರಿಯಲ್ಲಿ ಕೈಕೊಟ್ಟಿದ್ದು, ರಸ್ತೆಯಲ್ಲೇ ಉಳಿದುಕೊಂಡಿದ್ದಾರೆ. ರಾತ್ರಿ ಉಳಿದುಕೊಳ್ಳಲು ಅವರಿಗೆ ವಸತಿ ಸೌಕರ್ಯ ಏರ್ಪಡಿಸುವಂತೆ ಫೋನಿನಲ್ಲಿ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿಚಾರಿಸಿದಾಗ ಆತನ ವರ್ತನೆಯಲ್ಲಿ ಸಂಶಯಗೊಂಡು ಗುರುತುಪತ್ರ ಕೇಳಿದಾಗ ನಿರಾಕರಿಸಿದ್ದಾನೆ ಎನ್ನಲಾಗಿದೆ. ಆ ಬಳಿಕ ತೀವ್ರ ವಿಚಾರಣೆ ನಡೆಸಿದಾಗ ಆತ ಹಲವು ಪ್ರಕರಣಗಳ ಆರೋಪಿಯೆಂದು ತಿಳಿದು ಆತನನ್ನು ಬಂಧಿಸಲಾಗಿದೆ.

Also Read  ಕರ್ನಾಟಕ ಕರಾವಳಿ ಮೀನುಗಾರಿಕಾ ಇಲಾಖೆಯಿಂದ ಮೀನುಗಾರಿಕೆ ಮಾಡದಂತೆ ನಿಷೇಧಾಜ್ಞೆ ಜಾರಿ

error: Content is protected !!
Scroll to Top