ಕಡಬದ ವೈದ್ಯಕೀಯ ವ್ಯವಸ್ಥೆಗೆ ಮತ್ತೊಂದು ಗರಿ ‘ಕಡಬ ಮೆಡಿಕಲ್ ಸೆಂಟರ್’ – ಸಕಲ ಸೌಲಭ್ಯಗಳೊಂದಿಗೆ ಕಡಬದಲ್ಲಿ ಆರಂಭಗೊಂಡ ಸುಸಜ್ಜಿತ ಆಸ್ಪತ್ರೆ

(ನ್ಯೂಸ್ ಕಡಬ) newskadaba.com ಕಡಬ, ಜ.07. ತಾಲೂಕು ಕೇಂದ್ರವಾಗಿರುವ ಕಡಬಕ್ಕೆ ಅತೀ ಅಗತ್ಯವಾಗಿ ಬೇಕಾಗಿದ್ದ ಮೆಡಿಕಲ್ ವ್ಯವಸ್ಥೆಗೆ ಪೂರಕವೆಂಬಂತೆ ಇಲ್ಲಿನ ಕಳಾರದಲ್ಲಿ ಸಕಲ ವೈದ್ಯಕೀಯ ವ್ಯವಸ್ಥೆಗಳನ್ನು ಒಳಗೊಂಡ ‘ಕಡಬ ಮೆಡಿಕಲ್ ಸೆಂಟರ್’ ಇತ್ತೀಚೆಗೆ ಶುಭಾರಂಭಗೊಂಡಿತು.

ಕಳಾರದಲ್ಲಿರುವ ಮಾಂಡವಿ ಶೋರೂಂ ಮುಂಭಾಗದಲ್ಲಿ ಆರಂಭಗೊಂಡಿರುವ ನೂತನ ಮೆಡಿಕಲ್ ಸೆಂಟರ್‌ ನಲ್ಲಿ ತಜ್ಞ ವೈದ್ಯರು ಎಲ್ಲಾ ದಿನಗಳಲ್ಲೂ ಲಭ್ಯರಿದ್ದು, ಕಡಬದಲ್ಲೇ ಪ್ರಥಮ ಬಾರಿಗೆ ಎಲ್ಲಾ ರೀತಿಯ ಸ್ಕ್ಯಾನಿಂಗ್, ಮೈನರ್ ಓಟಿ, ಲ್ಯಾಬ್, ಫಾರ್ಮಸಿ, ಇ.ಸಿ.ಜಿ., ಆಲ್ಟ್ರಾ ಸೋನೋಗ್ರಫಿ, ಪ್ರೈಮರಿ ಎಮರ್ಜೆನ್ಸಿ ಕೇರ್, ಕನ್ಸಲ್ಟೇಷನ್, ಡೇ ಕೇರ್ ಒಬ್ಸರ್ವೇಷನ್ ಮೊದಲಾದ ಸೇವೆಗಳು ದಿನದ 24 ಗಂಟೆಗಳ ಕಾಲ ಇರಲಿದೆ. ನುರಿತ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಜನಸಾಮಾನ್ಯರ ಆರೋಗ್ಯ ಹಿತದೃಷ್ಟಿಗಾಗಿ ಶ್ರಮಿಸುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಕಲ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆ ‘ಕಡಬ ಮೆಡಿಕಲ್ ಸೆಂಟರ್’ ಕಡಬದ ಜನತೆಗೆ ಸೇವೆ ನೀಡಲು ಸಿದ್ಧವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಅಪಾಯಿಂಟ್ ಮೆಂಟ್ ಗಾಗಿ 7899555300 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಈ ರೀತಿ ವ್ಯವಹಾರದಲ್ಲಿ ಗೆಲುವು ಪಡೆಯಿರಿ ಮತ್ತು ದಿನ ಭವಿಷ್ಯ

error: Content is protected !!
Scroll to Top