(ನ್ಯೂಸ್ ಕಡಬ) newskadaba.com ಟೋಕಿಯೊ, ಜ. 02. ಸರಣಿ ಭೂಕಂಪಗಳಿಂದಾಗಿ ಜಪಾನ್ ದೇಶವು ನಲುಗಿ ಹೋಗಿದ್ದು, ಇಂದಿನವರೆಗೆ 155 ಭೂಕಂಪಗಳು ಸಂಭವಿಸಿವೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರದಂದು 7.6 ಮತ್ತು 6 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಭೂಕಂಪನದಿಂದ ಕನಿಷ್ಠ 12 ಮಂದಿ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ಇನ್ನು ಭೂಕಂಪದ ತೀವ್ರತೆಗೆ ಸಮುದ್ರದಲ್ಲಿ ಸುನಾಮಿ ಭೀತಿ ಆವರಿಸಿದ್ದು ಅಲೆಗಳ ಹೊಡೆತಕ್ಕೆ ಅನೇಕ ಮನೆಗಳು ನೆಲಸಮವಾಗಿರುವುದಾಘಿ ವರದಿ ತಿಳಿಸಿದೆ.