ಕಡಬ: ನಾಳೆ (ಡಿ. 31) ಎಸ್ಸೆಸ್ಸೆಫ್ ಕಡಬ ಡಿವಿಷನ್ ಮಟ್ಟದ ‘ಸಾಹಿತ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಡಿ. 30. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್(ರಿ)ಕಡಬ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ನಾಳೆ ಡಿಸೆಂಬರ್ 31 ಆದಿತ್ಯವಾರದಂದು 8 ಗಂಟೆಯಿಂದ ಕಲ್ಲಾಜೆ ರಹ್ಮಾನಿಯ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ.


ಈ ಕಾರ್ಯಕ್ರಮದಲ್ಲಿ ಡಿವಿಷನ್ ವ್ಯಾಪ್ತಿಯ ಸವಣೂರು, ನೆಲ್ಯಾಡಿ ನಿಂತಿಕಲ್ಲು ಹಾಗೂ ಕಡಬ ಸೆಕ್ಟರ್ ಗಳ 30 ಯೂನಿಟ್ ಗಳಿಂದ ಆಯ್ಕೆಯಾದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು 5 ವಿಭಾಗದಲ್ಲಿ ಆಕರ್ಷಕ 4 ವೇದಿಕೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ಪ್ರಸ್ತುತ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಸಯ್ಯಿದರು, ಎಸ್ಎಸ್ಎಫ್ ರಾಜ್ಯಾಧ್ಯಕ್ಷರು, ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದು, ದೀನೀ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸ್ವಾಗತ ಸಮಿತಿ ಚೇರ್ಮನ್ ಝಿಯಾರ್ ಕೋಡಿಂಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಗೃಹರಕ್ಷಕರ ಸೇವೆ ಶ್ಲಾಘನೀಯ ➤ ಡಾ|| ರಾಜೇಂದ್ರ ಕೆ.ವಿ.

error: Content is protected !!
Scroll to Top