ತೆಂಗಿನ ಚೂರು ಗಂಟಲಲ್ಲಿ ಸಿಲುಕಿ ಶಿಕ್ಷಕಿ ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.11. ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿದ ಪರಿಣಾಮ ಶಿಕ್ಷಕಿಯೊಬ್ಬರು ಮೃತಪಟ್ಟ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯಲ್ಲಿ ಶನಿವಾರದಂದು ನಡೆದಿದೆ.

ಮೃತರನ್ನು ಹಿರೇಮಗಳೂರು ನಿವಾಸಿ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯ ಶಿಕ್ಷಕಿ ನವ್ಯಶ್ರೀ (28) ಎಂದು ಗುರುತಿಸಲಾಗಿದೆ. ನವ್ಯಶ್ರೀ ಚಿಕ್ಕಮಗಳೂರು ನಗರದಲ್ಲಿರುವ ಸಾಲುಮರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದ ತೆಂಗಿನ ಕಾಯಿಯ ಚೂರನ್ನು ತಿಂದಿದ್ದು, ಅವರ ಅನ್ನನಾಳಕ್ಕೆ ಕಾಯಿಯ ಚೂರು ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದು ಬಿದ್ದ ಅವರಿಗೆ ತಕ್ಷಣವೇ ಅಲ್ಲಿದ್ದ ಶಿಕ್ಷಕರು ನೀರು ಕುಡಿಸಿ, ಎದೆ ಒತ್ತುತ್ತಿದಂತೆ ನವ್ಯಶ್ರೀಗೆ ಅನ್ನನಾಳದಲ್ಲಿ ಸಿಲುಕಿದ್ದ ತೆಂಗಿನಕಾಯಿ ಚೂರು ಬಾಯಿಂದ ಹೊರಬಂದಿದೆ. ಆದರೆ ಉಸಿರಿನ ತೊಂದರೆಯಿಂದ ತೀವ್ರವಾಗಿ ಬಳಲಿದ ನವ್ಯಶ್ರೀಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮದುವೆಯಾಗಿ 5 ವರ್ಷವಾಗಿರೋ ನವ್ಯಶ್ರೀಗೆ 10 ತಿಂಗಳ ಪುಟ್ಟ ಮಗು ಕೂಡ ಇದೆ. ಪುಟ್ಟ ಮಗುವನ್ನ ಬಿಟ್ಟು ಅಗಲಿದ ತಾಯಿಯನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Also Read  ಉರುಳಿಗೆ ಬಿದ್ದ ಚಿರತೆ..! ➤ ಅರಣ್ಯ‌ ಇಲಾಖೆಯಿಂದ‌ ಯಶಸ್ವಿ ಕಾರ್ಯಾಚರಣೆ

error: Content is protected !!
Scroll to Top