ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ|ದೇವಿ ಪ್ರಸಾದ್ ಕಾನತ್ತೂರು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 17. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಕಾನತ್ತೂರು ರವರು ಆಯ್ಕೆಯಾದರು. ಸಭೆಯ ಅಧ್ಯಕ್ಷತೆಯನ್ನು ಪಂಜ ನಾಡಕಚೇರಿಯ ಉಪತಹಶೀಲ್ದಾರ ಚಂದ್ರಕಾಂತರು ಹಾಗೂ ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ ವಹಿಸಿದ್ದರು.

ಉತ್ಸವ ಸಮಿತಿ ಸದಸ್ಯರಾದ ಬಾಲಕೃಷ್ಣ ಕುದ್ವ, ಕುಶಾಲಪ್ಪ ದೊಡ್ಡಮನೆ, ಮಾಯಿಲಪ್ಪ ಗೌಡ ಎನ್, ಧರ್ಮಣ್ಣ ನಾಯಕ್ ಗರಡಿ, ಧರ್ಮಪಾಲ ಕಾಚಿಲ, ಕೇಶವ ಕುದ್ವ, ಸಂತೋಷ್ ಕುಮಾರ್ ರೈ ಬಳ್ಪ, ಪವಿತ್ರ ಮಲ್ಲೆಟ್ಟಿ, ತಿಮ್ಮಪ್ಪ ಗೌಡ ಪುತ್ಯ, ಅಶ್ವಿನ್ ಬಾಬುಲ್ ಬೆಟ್ಟು, ಶರತ್ ಕುದ್ವ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಕಂಬಳ ಆನಂದ ಗೌಡ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಂಕರ ಭಟ್, ರಂಜಿತ್ ಭಟ್, ಗಂಗಾಧರ ಗುಂಡಡ್ಕ, ಲೋಕೇಶ್ ಅಕ್ರಿಕಟ್ಟೆ, ಅರ್ಚಕರಾದ ರಾಮಚಂದ್ರ ಭಟ್ ಹಾಗೂ ಊರ ಭಕ್ತಾಭಿಮಾನಿಗಳು ಜಾತ್ರೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಬಾಲಕೃಷ್ಣ ಗೌಡ ಕುದ್ವ ಸ್ವಾಗತಿಸಿ ವಂದಿಸಿದರು. ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Also Read  ಕಡಬ: ಇನ್ನೋವಾ ಹಾಗೂ ಆಲ್ಟೋ 800 ನಡುವೆ ಢಿಕ್ಕಿ ➤ ಕಾರಿನಲ್ಲಿ ಕೋವಿ ಪತ್ತೆ | ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿ

error: Content is protected !!
Scroll to Top