ಯುವಕವಿಗೋಷ್ಠಿ- ಎಸ್.ಡಿ.ಎಂ ವಿದ್ಯಾರ್ಥಿ ಸಮ್ಯಕ್ತ್ ಜೈನ್ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 17. ಈ ಬಾರಿಯ ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಯುವಕವಿಗೋಷ್ಠಿಗೆ ತಾಲೂಕಿನ ಸ್ನಾತಕೋತ್ತರ ವಿದ್ಯಾರ್ಥಿ ಸಮ್ಯಕ್ತ್ ಜೈನ್ ಅವರು ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿ ವಾಣಿ ಕಾಲೇಜಿನ ಆವರಣದಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ 18ನೇ ತಾಲೂಕು ಸಾಹಿತ್ಯ ಸಮ್ಮೇಳನವು ಡಿ.17ರಂದು ಆಯೋಜನೆಗೊಂಡಿದ್ದು, ವಿವಿಧ ಸಾಹಿತ್ಯಪೂರ್ಣ ಕಾರ್ಯಕ್ರಮಗಳಿಂದ ಕಂಗೊಳಿಸಲಿದೆ. ಸಾಹಿತ್ಯ ಭಾಗಗಳಲ್ಲಿ ಒಂದಾದ ‘ಯುವ ಕವಿಗೋಷ್ಠಿ’ಗೆ ಬೆಳ್ತಂಗಡಿ ತಾಲೂಕಿನ ಎಸ್.ಡಿ.ಎಂ ಕಾಲೇಜು ಉಜಿರೆ ಇಲ್ಲಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಸಮ್ಯಕ್ತ್ ಜೈನ್ ಆಯ್ಕೆಯಾಗಿದ್ದಾರೆ. ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿಯ ಸುಪುತ್ರರಾಗಿರುವ ಇವರು ಇದುವರೆಗೆ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಲೋಕದಲ್ಲಿ ಮುಂದುವರೆಯುತ್ತಿದ್ದು, ಈಗಾಗಲೇ ಹಲವಾರು ರಾಜ್ಯ ಅಂತರರಾಜ್ಯ ಮಟ್ಟದ ಬಹುಮಾನ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

Also Read  ಸುಳ್ಯ: ಬೈಕ್ ಕಳ್ಳತನ- ಆರೋಪಿ ಸೆರೆ

error: Content is protected !!
Scroll to Top