Viral Video – ತಮ್ಮ ಮದುವೆಯ ಫರ್ಸ್ಟ್ ನೈಟ್ ವೀಡಿಯೋವನ್ನೇ ಹಂಚಿಕೊಂಡ ದಂಪತಿ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.17. ಮದುವೆ ಅನ್ನುವುದು ಜೀವನದ ಪ್ರಮುಖ ಘಟ್ಟವಾಗಿದ್ದು, ಕೆಲವು ಕ್ಷಣಗಳು ಖಾಸಗಿಯಾಗಿ ಉಳಿಯಬೇಕಾಗಿ ಇರುವಂತಹದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಜೀವನದ ಪ್ರತೀ ಆಗುಹೋಗುಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುವವರು ಕೆಲವರಿದ್ದಾರೆ.

ಅಂತಹದೇ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೋರ್ವ ತನ್ನ ಫರ್ಸ್ ನೈಟ್ ದೃಶ್ಯಗಳನ್ನು ತಾನೇ ವೀಡಿಯೋ ಮಾಡಿ ಹಂಚಿಕೊಂಡಿದ್ದಾನೆ. ನವದಂಪತಿಯು ಖಾಸಗಿಯಾಗಿ ಇರಬೇಕಾಗಿದ್ದ ಪ್ರೀತಿಯ ಕ್ಷಣಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ಕ್ಯಾಮರಾ ಮುಂದೆ ಪ್ರಸ್ತುತಪಡಿಸಿದ್ದಾರೆ. ತಬ್ಬಿಕೊಂಡು ಮುದ್ದಾಡಿದ ದಂಪತಿ, ವರನೇ ವಧುವಿನ ಆಭರಣ ಕಳಚಲು ಸಹಾಯ ಮಾಡಿದ್ದಾನೆ. ಪ್ರತಿಯೊಂದು ಹಂತದಲ್ಲೂ ಮುತ್ತಿನ ಸುರಿಮಳೆಗೈದು ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಇದೀಗ ವೀಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದೆ.

error: Content is protected !!
Scroll to Top