ಬಂಟ್ವಾಳದ ಕ್ರಿಮಿನಲ್ ಗಳ ಅಡ್ಡೆಗೆ ನುಗ್ಗಿದ ರಿಯಲ್ ಸಿಂಗಂ ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com
ಮಂಗಳೂರು, ಜೂ.24. ಜಿಲ್ಲಾ ಪೊಲೀಸರ ನಿಯಂತ್ರಣಕ್ಕೆ ಸಿಗದೆ ಕಳೆದ ಹಲವು ದಿನಗಳಿಂದ ಕೋಮು ಗಲಭೆಗೆ ತುತ್ತಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪರಿಸರ ಇದೀಗ ಚಿಕ್ಕಮಗಳೂರಿನ ಖಡಕ್ ಎಸ್ಪಿ ಅಣ್ಣಾಮಲೈಯವರ ಬಿಗಿಮುಷ್ಟಿಯಲ್ಲಿ ಭದ್ರವಾಗಿ ನಿಂತಿದೆ.

ರಿಯಲ್ ಸಿಂಗಂ ಎಂದೇ ಖ್ಯಾತರಾಗಿರುವ ಐಪಿಎಸ್ ಅಧಿಕಾರಿ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಆಗಮನದಿಂದಾಗಿ ಜಿಲ್ಲೆಯ ಕೋಮುವಾದಿ ಹಾಗೂ ಕ್ರಿಮಿನಲ್ ಗಳಿಗೆ ನಡುಕವುಂಟಾಗಿದೆ. ಸರಕಾರದ ನಿರ್ದೇಶನದಂತೆ ಬುಧವಾರ ಸಂಜೆಯೇ ಜಿಲ್ಲೆಗೆ ಗಗಮಿಸಿದ ಎಸ್ಪಿ ಅಣ್ಣಾಮಲೈ ತನ್ನ ವಿಶಿಷ್ಟ ರಫ್ ಅಂಡ್ ಟಫ್ ಕಾರ್ಯತಂತ್ರವನ್ನು ಶುರು ಮಾಡಿದ್ದರು.

ಬಂಟ್ವಾಳ ಪೊಲೀಸ್ ನಗರ ಠಾಣೆಗೆ ಭೇಟಿ ನೀಡಿದ ಅಣ್ಣಾಮಲೈ, ನಂತರ ತಾಲೂಕಿನ ಅತಿಸೂಕ್ಷ್ಮ ಪ್ರದೇಶಗಳಾದ ಮಾರಿಪಳ್ಳ, ಫರಂಗಿಪೇಟೆ, ಬಿ.ಸಿ.ರೋಡ್, ಕೈಕಂಬ, ಶಾಂತಿ ಅಂಗಡಿ ಮತ್ತಿತರ ಪ್ರದೇಶಗಳಿಗೆ ತೆರಳಿ
ಸ್ಥಳೀಯ ಯುವಕರನ್ನು ಕರೆದು ಪ್ರಾದೇಶಿಕ ಬೆಳವಣಿಗೆಯ ಬಗ್ಗೆ ಆತ್ಮೀಯತೆಯಲ್ಲಿ ಮಾತನಾಡಿ ಅಣ್ಣಾಮಲೈ ವಿಷಯ ಕಲೆ ಹಾಕಿದರು. ನಂತರ ಜಿಲ್ಲೆಯ ಘಟನೆಗಳನ್ನು ಅವಲೋಕಿಸಿ ತನ್ನ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡುವ ಮೂಲಕ ಕೋಮುವಾದಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹತೋಟಿಗೆ ತಂದಿದ್ದಾರೆ.
ಕೊನೆಗೂ ರಿಯಲ್‌ ಸಿಂಗಂ ಅಬ್ಬರಕ್ಕೆ ಜಿಲ್ಲೆಯ ಹುಲಿ-ಸಿಂಹ ಗಳ ಕೋಟೆಗಳು ಇದೀಗ ಶಾಂತಿಯನ್ನು ಬಯಸುತ್ತಿವೆ.

Also Read  ಡೆಂಗ್ಯು ನಿಯಂತ್ರಣಕ್ಕೆ ಕಾರ್ಯಾಚರಣೆ ತೀವ್ರಗೊಳಿಸಲು ಸೂಚನೆ ➤ ಉಸ್ತುವಾರಿ ಕಾರ್ಯದರ್ಶಿ: ಬಿ.ಎಚ್. ಅನಿಲ್ ಕುಮಾರ್

error: Content is protected !!
Scroll to Top