ನೆಲ್ಯಾಡಿ: ಖಾಸಗಿ ಶಾಲಾ ಬಸ್ – ದ್ವಿಚಕ್ರ ವಾಹನ ನಡುವೆ ಢಿಕ್ಕಿ – ದ್ವಿಚಕ್ರ ವಾಹನ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.13. ಶಾಲಾ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಪಡುಬೆಟ್ಟು ಎಂಬಲ್ಲಿ ಬುಧವಾರದಂದು ನಡೆದಿದೆ.

ಗಾಯಾಳುವನ್ನು ಪಡುಬೆಟ್ಟು ನಿವಾಸಿ ಸಾಬಿತ್(23) ಎಂದು ಗುರುತಿಸಲಾಗಿದೆ. ಪಡುಬೆಟ್ಟು ಖಾಸಗಿ ಶಾಲೆಯ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಪಡುಬೆಟ್ಟು ಎಂಬಲ್ಲಿ ಬುಧವಾರದಂದು ಢಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಸಾಬಿತ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ಮರು ಡಾಮರೀಕರಣ ► ನಬಾರ್ಡ್‌ನಿಂದ 49 ಲಕ್ಷ ರೂ.ಬಿಡುಗಡೆ

error: Content is protected !!
Scroll to Top