ಕಡಬ: ವಿಷ ಸೇವಿಸಿ ವೃದ್ಧೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಡಿ.13. ವೃದ್ಧೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಎಂಬಲ್ಲಿ ಮಂಗಳವಾರದ ರಾತ್ರಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯನ್ನು ಕುಟ್ರುಪ್ಪಾಡಿ ಗ್ರಾಮದ ಬೈದ್ರಿಜಾಲು ನಿವಾಸಿ ಬಾಬು ಗೌಡ ಎಂಬವರ ಪತ್ನಿ ಶಿವಮ್ಮ(78) ಎಂದು ಗುರುತಿಸಲಾಗಿದೆ. ಶಿವಮ್ಮ ಅವರು ಮಂಗಳವಾರ ಸಂಜೆ ತನ್ನ ಮನೆಯಲ್ಲಿ ಎಂಡೋಸಲ್ಫಾನ್ ಸೇವಿಸಿದ್ದು, ತಕ್ಷಣವೇ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆ ಮೃತಪಟ್ಟಿದ್ದಾರೆ.

Also Read  ಈಶ್ವರಮಂಗಲ ➤ 25 ಅಡಿ ಆಳಕ್ಕೆ ಉರುಳಿ ಮನೆಯ ಮೇಲೆ ಪಲ್ಟಿಯಾದ KSRTC ಬಸ್

error: Content is protected !!
Scroll to Top