ಸುಳ್ಯ: ಕಾರು ಹಾಗೂ ಲಾರಿ ನಡುವೆ ಅಪಘಾತ- ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 07. ಕಾರು ಹಾಗೂ ಲಾರಿ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆದಿದೆ.


ಗಾಯಗೊಂಡ ಕಾರು ಚಾಲಕನನ್ನು ಶಿವಪ್ಪ ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಸಂಪಾಜೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಗೂನಡ್ಕದಲ್ಲಿ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಚಾಲಕ ಶಿವಪ್ಪರವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

Also Read  ಆತೂರು: ಹಫ್ವಾ ಕುಟುಂಬ ಸಮ್ಮಿಲನ-2020 ➤ ಸಂಘಟಿತ ಕುಟುಂಬ ಸಂಬಂಧದಿಂದ ಸಮುದಾಯ ಸಬಲೀಕರಣ ಸಾಧ್ಯ-ಹೆಚ್. ಮಹಮ್ಮದ್ ಆಲಿ

error: Content is protected !!
Scroll to Top