ನವೆಂಬರ್ 27ರಂದು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಪ್ರಧಾನಿ ಮೋದಿ ಭೇಟಿ- ಭರದ ಸಿದ್ದತೆ

(ನ್ಯೂಸ್ ಕಡಬ) newskadaba.com ತಿರುಪತಿ, ನ. 25. ಪ್ರಧಾನಿ ನರೇಂದ್ರ ಮೋದಿಯವರು ನ. 27 ರಂದು ವಿಶ್ವವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.


ಪ್ರಧಾನಿ ಮೋದಿಯವರು ನ. 26ರ ರಾತ್ರಿ ತಿರುಪತಿಯಲ್ಲಿ ವಾಸ್ತವ್ಯ ಹೂಡಲಿದ್ದು, ನ.27 ರಂದು ಬೆಳಗ್ಗೆ 8 ಗಂಟೆಗೆ ತಿರುಪತಿಯ ಭಗವಾನ್‌ ಬಾಲಾಜಿಯ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಪ್ರಧಾನಿ ಜೊತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಮತ್ತು ರಾಜ್ಯ ಸಚಿವರು ಹಾಗೂ ಸಂಸದರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಭೇಟಿ ಹಿನ್ನೆಲೆ ನ. 27ರಂದು ದೇವಸ್ಥಾನದಲ್ಲಿ ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Also Read  ಕೊರೋನಾ ತಡೆಗಟ್ಟಲು ವೈದ್ಯರ ಸಲಹೆಯೇನು..? ಉತ್ತರ 'ನ್ಯೂಸ್ ಕಡಬ'ದ ಗ್ರೌಂಡ್ ರಿಪೋರ್ಟ್ ನಲ್ಲಿ

error: Content is protected !!
Scroll to Top