ಶೂಟಿಂಗ್ ಮಾಡುವವರಿಗೆ BMRCL ಗುಡ್ ನ್ಯೂಸ್ – ಇನ್ಮುಂದೆ ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಅವಕಾಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 24. ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಕಾಯುತ್ತಿದ್ದ ಚಿತ್ರರಂಗದ ಮಂದಿಗೆ ಬಿಎಂಆರ್‌ಸಿಎಲ್‌ ಗುಡ್‌ನ್ಯೂಸ್‌ ನೀಡಿದೆ.

ದೆಹಲಿ ಹಾಗೂ ಚೆನ್ನೈ ಮೆಟ್ರೋ ಬಳಿಕ ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲೂ ಸಿನಿಮಾ ಹಾಗೂ ಸೀರಿಯಲ್‌ ಶೂಟಿಂಗ್‌ಗೆ ಅನುಮತಿ ನೀಡಲು BMRCL ಮುಂದಾಗಿದ್ದು, ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲುಗಳಲ್ಲಿ ಬಣ್ಣದ ಲೋಕದ ಗದ್ದಲ ಕೇಳುವ ಕಾಲ ಸನ್ನಿಹಿತವಾಗಲಿದೆ ಎಂದರೂ ತಪ್ಪಾಗಲಾರದು.


ಸದ್ಯ ಬೆಂಗಳೂರಿನ ಮೆಟ್ರೋಗಳಲ್ಲಿ ಇದೀಗ ಚಿತ್ರೀಕರಣಕ್ಕೆ ಅವಕಾಶ ದೊರೆತಿದ್ದು, ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ ಜೋಶಾಯಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮೆಟ್ರೋ ಆವರಣ, ಮೆಟ್ರೋ ರೈಲುಗಳಲ್ಲಿ ಶೂಟಿಂಗ್‌ ಮಾಡಲು ದಿನವೊಂದಕ್ಕೆ 6 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಿದ ಬಿಎಂಆರ್.ಸಿಎಲ್ ಕನ್ನಡದ ಚಿತ್ರಗಳಿಗೆ 25% ರಿಯಾಯಿತಿ ಕೊಟ್ಟಿದೆ. ಇನ್ನು ಇತರೆ ಭಾಷೆಗಳ ಚಿತ್ರೀಕರಣಕ್ಕೆ 6 ಲಕ್ಷ ರೂ. ಹಣದ ವಸೂಲಿ ಮಾಡೋಕೆ ಪ್ಲಾನ್‌ ಮಾಡಿದೆ. ಇನ್ನು ಲಾ ಅಂಡ್ ಅರ್ಡರ್ ಸಮಸ್ಯೆ ಆಗುವ, ಸಮಾಜಕ್ಕೆ ಹಾನಿ ಉಂಟಾಗುವ, ಜನರ ಭಾವನೆಗೆ ಧಕ್ಕೆ ಉಂಟಾಗುವ ಯಾವುದೇ ಸಿನಿಮಾ ಅಥವಾ ಸೀರಿಯಲ್‌ ಶೂಟಿಂಗ್‌ಗೆ ನಿರ್ಬಂಧ ಹೇರಲಾಗಿದ್ದು, ಪೀಕ್‌ ಅವರ್‌ನಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಅವಕಾಶ ನೀಡಲು ತಯಾರಿ ನಡೆದಿದೆ. ಇನ್ನು ಶೂಟಿಂಗ್‌ನಿಂದ ಬಂದ ಹಣವನ್ನ ನಾನ್‌ಫೇರ್‌ ಇನ್‌ಕಮ್‌ ಅಂತ ಪರಿಗಣಿಸಿ ಒಂದು ವೇಳೆ ಮೆಟ್ರೋದರ ಏರಿಕೆಯಾದರೆ ಆ ಸಮಯದಲ್ಲಿ ಪ್ರಯಾಣಿಕರಿಗೆ ಸಬ್ಸಿಡಿ ರೂಪದಲ್ಲಿ ನೀಡಲು BMRCL ಸಿದ್ಧತೆ ನಡೆಸಿದೆ ಎನ್ನಲಾಗಿದೆ.

Also Read  ಕನ್ನಡದ ಖ್ಯಾತ ವಿಮರ್ಶಕ ಜಿ.ಎಸ್.ಆಮೂರ ವಿಧಿವಶ

ಮೆಟ್ರೋದಲ್ಲಿ ಚಿತ್ರೀಕರಣ ಮಾಡುವ ವೇಳೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದ್ದು, ಅದೇನೆಂದು ಈ ಕೆಳಗಿನಂತಿದೆ.
ಶೂಟಿಂಗ್‌ಗೆ ಮುನ್ನ ಅಪ್ಲಿಕೇಶನ್‌ ಹಾಗೂ ಸ್ಕ್ರಿಪ್ಟ್ ಸಲ್ಲಿಕೆ ಕಡ್ಡಾಯ. ಶೂಟಿಂಗ್ ವೇಳೆ ಕಲಾವಿದರು ಮೆಟ್ರೋ ಬಾಗಿಲು ಓಪನ್ ಮಾಡುವ ಹಾಗಿಲ್ಲ. ಹಾಗೆಯೇ ಪೀಕ್ ಅವರ್ ಇರುವ ಸಮಯದಲ್ಲಿ ಶೂಟ್ ಮಾಡುವ ಹಾಗಿಲ್ಲ. ಜೊತೆಗೆ ಶೂಟಿಂಗ್ ವೇಳೆ ಓರ್ವ BMRCL ಸಿಬ್ಬಂದಿ ಜೊತೆ ಇರುತ್ತಾರೆ. ಅನುಮತಿ ನೀಡಿರುವ ಸ್ಥಳದಲ್ಲಿ ಮಾತ್ರ ಶೂಟಿಂಗ್‌ ಮಾಡಬೇಕು. ಚಿತ್ರೀಕರಣದ ವೇಳೆ ಏನೇ ಅನಾಹುತ ಆದರೂ ಚಿತ್ರತಂಡವೇ ಹೊಣೆ.

Also Read  ಪೆರುವಾಜೆ :ಮರದಿಂದ ಬಿದ್ದು ವ್ಯಕ್ತಿ ಮೃತ್ಯು

error: Content is protected !!
Scroll to Top