ಕಡಬ: ನಾಳೆ (ನ.24) ಕರ್ನಾಟಕ ಸಲಫಿ ಅಸೋಸಿಯೇಷನ್ ವತಿಯಿಂದ ಧಾರ್ಮಿಕ ಕಾರ್ಯಕ್ರಮ – ಡ್ರಗ್ಸ್ ಮುಕ್ತರಾಗೋಣ, ಸೃಷ್ಟಿಕರ್ತನಿಗೆ ವಿಧೇಯರಾಗೋಣ ಧ್ಯೇಯದಡಿ ಧಾರ್ಮಿಕ ಪ್ರಭಾಷಣ

(ನ್ಯೂಸ್ ಕಡಬ) newskadaba.com ಕಡಬ, ನ. 23. ಕರ್ನಾಟಕ ಸಲಫಿ ಅಸೋಸಿಯೇಷನ್ (ರಿ.) ಸುಳ್ಯ ಮತ್ತು ಬೆಳ್ಳಾರೆ ಘಟಕದ ವತಿಯಿಂದ ಡ್ರಗ್ಸ್ ಮುಕ್ತರಾಗೋಣ, ಸೃಷ್ಟಿಕರ್ತನಿಗೆ ವಿಧೇಯರಾಗೋಣ ಎಂಬ ಧ್ಯೇಯವಾಕ್ಯದಡಿ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವು ನಾಳೆ (ನ.24 ಶುಕ್ರವಾರ) ಕಡಬದ ಅನುಗ್ರಹ ಸಭಾಭವನದ ವಠಾರದಲ್ಲಿ ನಡೆಯಲಿದೆ.

ನಾಳೆ ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜ| ಇಬ್ರಾಹಿಂ ಖಲೀಲ್ ತಲಪಾಡಿ ಪ್ರಭಾಷಣಗೈಯಲಿದ್ದು, ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಎಂ.ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ವಿಷವಿಕ್ಕಿದ ಕೋತಿಗಳನ್ನು ಎಸೆದು ಹೋದ ಕಿಡಿಗೇಡಿಗಳು

error: Content is protected !!
Scroll to Top