ಬಂಟ್ವಾಳದ ಯುವಕ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ, . 23. ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕನೋರ್ವ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕುಕ್ಕಿಪ್ಪಾಡಿ, ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರ ಧನೇಶ್ ಶೆಟ್ಟಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ವಿವಾಹಿತರಾಗಿರುವ ಧನೇಶ್ ಅವರು ತನ್ನ ಪತ್ನಿಯೊಂದಿಗೆ ಇಂಡೋನೇಷಿಯಾದ ಆರೋಗ್ಯ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಧನೇಶ್ ಅವರು ವಾಮದಪದವು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಬಂಟ್ವಾಳ ಎಸ್‌ವಿಎಸ್ ಪ.ಪೂ.ಕಾಲೇಜಿನಲ್ಲಿ ಹೈಸ್ಕೂಲ್ ಹಾಗೂ ಪಿಯು ಶಿಕ್ಷಣ ಪಡೆದು ಮೂಡುಬಿದಿರೆ ಮಹಾವೀರ ಪಾಲಿಟೆಕ್ನಿಕ್‌ ನಲ್ಲಿ ಡಿಪ್ಲೋಮಾ ಹಾಗೂ ಬೆಂಗಳೂರಿನಲ್ಲಿ ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಶಾಲಾ, ಕಾಲೇಜು ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಆಡುತ್ತಿದ್ದ ಇವರು, ಉತ್ತಮ ಬ್ಯಾಟ್ಸ್‌ ಮನ್ ಅಗಿದ್ದು, ಇದೀಗ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

Also Read  ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಿಎಂ ಭರವಸೆ

error: Content is protected !!
Scroll to Top