ಸುಪ್ರೀಂ ಕೋರ್ಟ್ ನ ಮೊದಲ ನ್ಯಾಯಾಧೀಶೆ ಫಾತಿಮಾ ಬೀವಿ ವಿಧಿವಶ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ನ. 23. ಸುಪ್ರೀಂ ಕೋರ್ಟ್‌ನ ಮೊದಲ ನ್ಯಾಯಾಧೀಶೆ ಮತ್ತು ತಮಿಳುನಾಡಿನ ಮಾಜಿ ರಾಜ್ಯಪಾಲರಾಗಿದ್ದ ಫಾತಿಮಾ ಬೀವಿ(96) ಅವರು ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರದಂದು ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿದ್ದಾರೆ.

ಫಾತಿಮಾ ಬೀವಿ ನಿಧನಕ್ಕೆ ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಫಾತಿಮಾ ಬೀವಿ ಅವರು ಧೈರ್ಯಶಾಲಿ ಮಹಿಳೆಯಾಗಿದ್ದು, ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಗಟ್ಟಿಯಾಗಿದ್ದರೆ ಯಾವುದೇ ಪ್ರತಿಕೂಲತೆಯನ್ನು ಜಯಿಸಬಹುದು ಎಂಬುದಕ್ಕೆ ಫಾತಿಮಾ ಬೀವಿ ಸಾಕ್ಷಿ ಎಂದು ಕೇರಳ ಸಚಿವೆ ವೀಣಾ ಜಾರ್ಜ್‌ ಸಂತಾಪ ಸೂಚಿಸಿದ್ದಾರೆ.

Also Read  ಅತಿಯಾದ ಮೊಬೈಲ್ ಬಳಕೆ - ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

error: Content is protected !!
Scroll to Top