ಆನ್ಲೈಿನ್ ರಮ್ಮಿ ಗೇಮ್ ನ ಸಾಲ ತೀರಿಸಲು ಎಳನೀರು ಕಳ್ಳತನಗೈದ ಭೂಪ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 23. ಆನ್‍ಲೈನ್ ಗೇಮಿನಲ್ಲಿ ಮಾಡಿಕೊಂಡಿದ್ದ ಸಾಲ ತೀರಿಸಲು ಎಳನೀರು ಕಳ್ಳತನ ಮಾಡಿ ಬೆಳಗ್ಗೆ ಮಾರಾಟ ಮಾಡುತ್ತಿದ್ದ ಟ್ಯಾಕ್ಸಿ ಚಾಲಕನೋರ್ವನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.

ಬಂಧಿತನನ್ನು ತಮಿಳುನಾಡು ಮೂಲದ ಮೋಹನ್ ಎಂದು ಗುರುತಿಸಲಾಗಿದೆ. ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತಿದ್ದ ಈತ, ಬಿಡುವಿನ ಸಮಯದಲ್ಲಿ ಆನ್‍ಲೈನ್‍ನಲ್ಲಿ ರಮ್ಮಿ ಆಟವಾಡಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದನು. ಹೀಗೆ ಕಾರಿನಲ್ಲಿ ಹೋಗುತ್ತಿರುವಾಗ ಫುಟ್‍ಪಾತ್‍ನಲ್ಲಿ ಎಳನೀರು ಸಂಗ್ರಹಿಸಿಟ್ಟಿರುವುದನ್ನು ಗಮನಿಸಿದ ಮೋಹನ್, ಎಳನೀರನ್ನು ಕಳ್ಳತನ ಮಾಡಿ ಬಂದ ಹಣದಿಂದ ಸಾಲ ತೀರಿಸಲು ನಿರ್ಧರಿಸಿದ್ದಾನೆ. ಇತ್ತ ನ. 06ರಂದು ರಾಜಣ್ಣ ಎಂಬವರು ಮಂಕುತಿಮ್ಮ ಪಾರ್ಕ್ ಹತ್ತಿರ ಫುಟ್‍ಪಾತ್ ಮೇಲೆ ಎಳನೀರು ವ್ಯಾಪಾರ ಮಾಡಿ ಉಳಿದ 1150 ಎಳನೀರನ್ನು ಟರ್ಪಲ್‍ನಿಂದ ಮುಚ್ಚಿ ಮನೆಗೆ ಹೋಗಿದ್ದರು. ಮಾರನೇ ದಿನ ಬೆಳಗ್ಗೆ ಬಂದು ನೋಡಿದಾಗ ಫುಟ್‍ಪಾತ್‍ನಲ್ಲಿದ್ದ ಎಳನೀರು ಮಾಯವಾಗಿತ್ತು. ಈ ಕುರಿತು ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ 8.75 ಲಕ್ಷ ರೂ. ಬೆಲೆಬಾಳುವ 90 ಎಳನೀರುಗಳು, ಒಂದು ರಾಯಲ್ ಎನ್‍ಫೀಲ್ಡ್ ದ್ವಿಚಕ್ರ ವಾಹನ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

Also Read  ಪುನೀತ್ ಕೆರೆಹಳ್ಳಿ ಸೇರಿ ಐವರು ಆರೋಪಿಗಳ ಬಂಧನ..!!

error: Content is protected !!
Scroll to Top