ನವೆಂಬರ್ 26ರಂದು ಸಂವಿಧಾನ ದಿನ ಆಚರಣೆ – ರಾಜ್ಯ ಸರಕಾರದ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 23. ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡುವ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಮಹೇಶ್ ಆದೇಶ ಹೊರಡಿಸಿದ್ದಾರೆ.


ಜೊತೆಗೆ ಸಂವಿಧಾನ ಆಚರಣೆಯ ವಿಚಾರಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಭಾರತ ಸರ್ಕಾರದ ಪತ್ರದ ಪ್ರತಿಯೊಂದನ್ನು ಇದರೊಂದಿಗೆ ಲಗತ್ತಿಸಿದೆ.‌ ಪತ್ರದಲ್ಲಿರುವ ಸೂಚನೆ ಪ್ರಕಾರ, ಈ ವರ್ಷ ನವೆಂಬರ್ 26ರ ಭಾನುವಾರದಂದು ಸಂವಿಧಾನ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

Also Read  ಪುತ್ತೂರು ಪತ್ರಕರ್ತ ಸಂಘದ ನಾಮಫಲಕ ತುಳು ಭಾಷೆಯಲ್ಲಿರಲಿದೆ ➤ ಅಧ್ಯಕ್ಷ ಶ್ರವಣ್ ಕುಮಾರ್ ನಾಳ

error: Content is protected !!
Scroll to Top