ಲಿಡ್‍ ಕರ್ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 23. ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಪರಿಶಿಷ್ಟ ಜಾತಿ, ಆದಿ ಕರ್ನಾಟಕ, ಆದಿ ಮಾದಿಗ, ಚಮ್ಮಾರ ಸಮಗಾರ, ಮೋಚಿ ಜನಾಂಗದವರಿಗೆ 2023- 24ನೇ ಸಾಲಿನ ವಿವಿಧ ಯೋಜನೆಗಳಾದ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರ, ಮಾನವ ಸಂಪನ್ಮೂಲ ಯೋಜನೆ, ಸ್ವಾವಲಂಬಿ/ಸಂಚಾರಿ ಮಾರಾಟ ಮಳಿಗೆ, ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಪೂರ್ತಿ ಯೋಜನೆ, ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ ಮತ್ತು ವಸತಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Also Read  ಜುಲೈ 28: ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ

ಆಸಕ್ತ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಡಿಸೆಂಬರ್ 19 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9845801361 ಸಂಪರ್ಕಿಸುವಂತೆ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top