ಪರಿಪೂರ್ಣ ವ್ಯಕ್ತಿತ್ವದ ಡಾ.ಲಕ್ಷ್ಮಣ್ ಪ್ರಭುಗಳ ಅಗಲಿಕೆಯಿಂದ ಶೂನ್ಯತೆ ಸೃಷ್ಟಿಯಾಗಿದೆ – ಭುವನೇಶ್ವರಿ ಹೆಗಡೆ

(ನ್ಯೂಸ್ ಕಡಬ) newskadaba.com  ಮಂಗಳೂರು, ನ. 22. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಕವಿ ಹೃದಯದ ಹಿರಿಯ ಖ್ಯಾತ ವೈದ್ಯ ಡಾ.ಜಿ.ಜಿ.ಲಕ್ಷ್ಮಣ ಪ್ರಭು ಅವರಿಗೆ ಮಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್ ನಲ್ಲಿ ಶೃದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಶ್ರೀ.ಮಂಜುನಾಥ್ ಎಸ್. ರೇವಣಕರ್ ರವರು ಅಧ್ಯಕ್ಷತೆ  ವಹಿಸಿದ್ದರು. ನುಡಿನಮನ ಸಲ್ಲಿಸಿ ಮಾತನಾಡಿದ ಶ್ರೀಮತಿ ಭುವನೇಶ್ವರಿ ಹೆಗ್ಗಡೆಯವರು ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳ ವ್ಯಕ್ತಿತ್ವ, ಹಾಸ್ಯಪ್ರಿಯತೆ ಮತ್ತು ಕರ್ತವ್ಯ ಬದ್ಧತೆಯನ್ನು ಸಭೆಗೆ ಪರಿಚಯಿಸಿ, ಒಬ್ಬ ಆದರ್ಶ ವೈದ್ಯನಲ್ಲಿ ಇರಬೇಕಾದ ಎಲ್ಲ ಗುಣವೂ ಅವರಲ್ಲಿ ಇತ್ತು, ಕೆಲವು ವ್ಯಕ್ತಿಗಳಿಗೆ ಪರ್ಯಾಯವೇ ಇರುವುದಿಲ್ಲ. ಅಂಥಹ ವ್ಯಕ್ತಿಗಳಲ್ಲಿ ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳು ಒಬ್ಬರು. ಅವರ ಅಗಲಿಕೆಯಿಂದ ಉಂಟಾದ ಶೂನ್ಯತೆ ಹಾಗೆಯೇ ಉಳಿಯುತ್ತದೆ. ಅವರು ವೈದ್ಯರಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ಆದರ್ಶಪ್ರಿಯರು’ ಎಂದು ನುಡಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಯವರು ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳ ರೋಟರಿ, ಸಾಹಿತ್ಯದ ಒಡನಾಟ ಮತ್ತು ಸ್ನೇಹವನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು. ಇನ್ನೋರ್ವ ಗೌರವ ಕಾರ್ಯದರ್ಶಿ ಡಾ.ಮುರಲಿ ಮೋಹನ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು. ಎಲ್ಲರೂ ಒಂದು ನಿಮಿಷದ ಮೌನ ಪ್ರಾರ್ಥನೆಗೈದು, ಪುಷ್ಪ ನಮನ ಸಲ್ಲಿಸಿದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು. ಕ.ಸಾ.ಪ. ಕಾರ್ಯಕಾರಿಣಿಯ ಬಿ.ಕೃಷ್ಣಪ್ಪ ನಾಯ್ಕ್, ಸನತ್ ಕುಮಾರ್ ಜೈನ್, ಉಷಾ ಜಿ.ಪ್ರಸಾದ್ ಜೀ, ಅಭಾ ಮತ್ತಿತ್ತರರು ಉಪಸ್ಥಿತರಿದ್ದರು.

Also Read  ಸಸಿಗಳನ್ನು ನೆಡುವ ಕಾರ್ಯಕ್ರಮ

error: Content is protected !!
Scroll to Top