ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಮ್ಮಿಲನ – ಇದೇ ಮೊದಲ ಬಾರಿಗೆ 30 ಬ್ಯಾಚ್ ಗಳ ‘ಹಳೆ ನೆನಪು – ಹೊಸ ಸ್ನೇಹ’

(ನ್ಯೂಸ್ ಕಡಬ) newskadaba.com ಕಡಬ, ನ.10. ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಂಗಮ ‘ಹಳೆ ನೆನಪು – ಹೊಸ ಸ್ನೇಹ’ ನವೆಂಬರ್ 12 ಭಾನುವಾರದಂದು ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಸ್ಲೀಂ ಮರ್ಧಾಳ ತಿಳಿಸಿದರು.

ಅವರು ಶುಕ್ರವಾರದಂದು ಕಡಬ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1993ರಿಂದ 30 ಬ್ಯಾಚ್ ಗಳ ಹಳೆ ವಿದ್ಯಾರ್ಥಿಗಳ ಸಮ್ಮಿಲನವು ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಹಿರಿಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9.30 ರಿಂದ ಕ್ರೀಡಾಕೂಟ ನಡೆಯಲಿದ್ದು, ಮಧ್ಯಾಹ್ನದ ಭೋಜನ ವ್ಯವಸ್ಥೆ, ಅಪರಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಗುರುಗಳಿಗೆ ಗೌರವ ಅರ್ಪಣೆ, ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಹಳೆ ವಿದ್ಯಾರ್ಥಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನಿಕಟ ಪೂರ್ವಾಧ್ಯಕ್ಷ ಮಂಜುನಾಥ್ ಕೋಲಂತಾಡಿ, ದಯಾನಂದ ಉಂಡಿಲ, ವಿಜಿತ್ ಮರ್ಧಾಳ, ಅವಿಶ್ ತೋಮ್ಸನ್ ಉಪಸ್ಥಿತರಿದ್ದರು.

Also Read  ಮಾಣಿ: ರಸ್ತೆ ಬದಿ ಹೊಂಡಕ್ಕೆ ಉರುಳಿದ ಯಂತ್ರ ಸಾಗಾಟ ಲಾರಿ

error: Content is protected !!
Scroll to Top