(ನ್ಯೂಸ್ ಕಡಬ) newskadaba.com ಮಂಗಳೂರು, ಅ. 17. ಅಂತರ್ಜಲವನ್ನು ವಿವೇಚನಾ ರಹಿತವಾಗಿ ಬಳಸುವುದನ್ನು ಹಾಗೂ ಅಂತರ್ಜಲ ಲಭ್ಯತೆ ಅನುಸಾರ ಬಳಸದೆ ಇರುವ ಕಾರಣ ಅಂತರ್ಜಲ ಮಟ್ಟವು ಕುಸಿಯುತ್ತಿರುವುದನ್ನು ನಿಯಂತ್ರಿಸಲು ಮತ್ತು ಮಾನ್ಯ ರಾಷ್ರ್ಟೀಯ ಹಸಿರು ಪೀಠ (ಓಉಖಿ) ಆದೇಶದನ್ವಯ ಹಾಗೂ ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಸಭೆ ನಡವಳಿಯಂತೆ ಕೈಗಾರಿಕಾ, ವಾಣಿಜ್ಯ, ಮನರಂಜನೆ, ಮೂಲಸೌಕರ್ಯ, ಗಣಿಗಾರಿಕೆ ಮತ್ತು ಇತರೆ ಉದ್ದೇಶಕ್ಕಾಗಿ ಬಳಸುತ್ತಿರುವವರಿಗೆ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯಲು ಆದೇಶಿಸಿರುತ್ತಾರೆ.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ವಸತಿ ಸಮುಚ್ಚಯ, ವಾಣಿಜ್ಯ(ಕಮರ್ಶಿಯಲ್), ಮನರಂಜನೆ, ಮೂಲಸೌಕರ್ಯ, ಗಣಿಗಾರಿಕೆ ಮತ್ತು ಇತರೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುತ್ತಿರುವ ಸಾರ್ವಜನಿಕರು ತಮ್ಮ ಮಾಲಕರ ಹೆಸರು, ವಿಳಾಸ, ಕಟ್ಟಡ ಸಂಖ್ಯೆ, ಜಾಗದ ಸರ್ವೆ ನಂ., ಖಾತಾ ಮತ್ತು ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳನ್ನು ಮೂಡುಬಿದಿರೆ ಪುರಸಭಾ ಕಚೇರಿಗೆ ಸಲ್ಲಿಸುವಂತೆ ಪುರಸಭೆ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಮತ್ತು ಮುಖ್ಯಾಧಿಕಾರಿ ಇಂದು ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.