ಮಂಗಳಾದೇವಿ ದೇವಸ್ಥಾನ ನವರಾತ್ರಿ ಉತ್ಸವ – 11 ಸ್ಟಾಲ್ ಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 15. ಇಲ್ಲಿನ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂತೆ ವ್ಯಾಪಾರದಲ್ಲಿ ಸ್ಟಾಲ್ ಗಳ ಹರಾಜು ಸಂಬಂಧಿಸಿದಂತೆ 11 ಸ್ಟಾಲ್‌ಗ‌ಳ ಹರಾಜು ಪ್ರಕ್ರಿಯೆ ಶನಿವಾರದಂದು ನಡೆದಿದ್ದು, ಈ ವೇಳೆ ಆರು ಸ್ಟಾಲ್‌ಗ‌ಳನ್ನು ಅನ್ಯ ಸಮುದಾಯದವರು ಪಡೆದುಕೊಂಡಿದ್ದು, ಉಳಿದ ಐದು ಸ್ಟಾಲ್‌ಗ‌ಳು ಹಿಂದೂ ವ್ಯಾಪಾರಸ್ಥರ ಪಾಲಾಗಿದೆ.


ದೇವಸ್ಥಾನದ ಆಡಳಿತ ಸಮಿತಿಯು ಮೂರು ದಿನಗಳ ಹಿಂದೆಯೇ ವ್ಯಾಪಾರಕ್ಕೆ ಸಂಬಂಧಿಸಿ ಟೆಂಡರ್‌ ಕರೆದು ಅಂತಿಮಗೊಳಿಸಿದ್ದು, ಈ ಸಂದರ್ಭ 125 ಸ್ಟಾಲ್‌ಗ‌ಳ ಪೈಕಿ 71 ಮಂದಿ ಮಾತ್ರ ಬಿಡ್‌ ಮೊತ್ತ ಪಾವತಿಸಿ ಸ್ಟಾಲ್‌ಗ‌ಳನ್ನು ಪಡೆದುಕೊಂಡಿದ್ದರು. ಇದೀಗ ಮರು ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಈ ವೇಳೆ 11 ಸ್ಟಾಲ್‌ ಸೇರಿ ಒಟ್ಟು 82 ಸ್ಟಾಲ್‌ಗ‌ಳು ಹಂಚಿಕೆಯಾಗಿವೆ. ಇಲ್ಲಿಗೆ ಟೆಂಡರ್‌ ಪ್ರಕ್ರಿಯೆ ಅಂತ್ಯವಾಗಿದ್ದು, ಇನ್ನು ಬಾಕಿ ಉಳಿದಿರುವ ಸ್ಟಾಲ್‌ಗ‌ಳಿಗೆ ಟೆಂಡರ್‌ ಕರೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುವುದಾಗಿ ವರದಿಯಾಗಿದೆ.

Also Read  ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

error: Content is protected !!
Scroll to Top