ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಆ್ಯಂಟಿ ರೇಬಿಸ್ ಲಸಿಕೆ ನೀಡಲು ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 15. ಪ್ರಾಣಿ ಕಡಿತಕ್ಕೊಳಗಾದವರಿಗೆ ರೇಬೀಸ್‌ ಚಿಕಿತ್ಸೆಗಾಗಿ ಆ್ಯಂಟಿ ರೇಬೀಸ್‌ ವ್ಯಾಕ್ಸಿನ್‌ ಹಾಗೂ ರೇಬೀಸ್‌ ಇಮ್ಯುನೋಗ್ಲಾಬಿಲಿನ್‌ ವ್ಯಾಕ್ಸಿನ್‌ಗಳನ್ನು ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವಂತೆ ಸರಕಾರ ಆದೇಶ ನೀಡಿದ್ದರೂ ಜಿಲ್ಲೆಯ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್‌ ನೀಡಲು ಶುಲ್ಕ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.


ರೇಬೀಸ್‌ ಎನ್ನುವುದು ಮಾರಣಾಂತಿಕ ಕಾಯಿಲೆಯಾಗಿದ್ದರೂ ಸಂದರ್ಭೋಚಿತ ಸೂಕ್ತ ಚಿಕಿತ್ಸೆಯಿಂದ ರೇಬಿಸ್ ರೋಗಕ್ಕೆ ಒಳಗಾದ ವ್ಯಕ್ತಿಯ ಪ್ರಾಣವನ್ನು ಉಳಿಸಬಹುದು. 2030ರ ವೇಳೆಗೆ ನಾಯಿ ಕಡಿತದಿಂದ ಬರುವ ರೇಬೀಸ್‌ನ ನಿರ್ಮೂಲನೆ ಮಾಡುವುದೇ ರಾಷ್ಟ್ರೀಯ ರೇಬೀಸ್‌ ನಿಯಂತ್ರಣ ಕಾರ್ಯಕ್ರಮದ ಧ್ಯೇಯವಾಗಿದೆ.

ಈ ಕಾಯಿಲೆಯಿಂದ ಜೀವ ರಕ್ಷಿಸಬಲ್ಲ ಔಷಧಗಳಾದ ಎಆರ್‌ವಿ ಹಾಗೂ ರೇಬೀಸ್‌ ಇಮ್ಯುನೋಗ್ಲಾಬಿಲಿನ್‌ (ಆರ್‌ಐಜಿ) ವ್ಯಾಕ್ಸಿನ್‌ಗಳನ್ನು ರಾಜ್ಯದ ಎಲ್ಲಾ ಸರಕಾರಿ ಆಸ್ಪತೆಗಳಲ್ಲಿ ಎಪಿಎಲ್‌/ಬಿಪಿಎಲ್‌ ಕಾರ್ಡ್‌ ಹೊಂದಿರುವ ಬಗ್ಗೆ ಪರಿಗಣಿಸದೇ ಎಲ್ಲ ಪ್ರಾಣಿ ಕಡಿತ ಪ್ರಕರಣಗಳಿಗೆ ಅಗತ್ಯಕ್ಕನುಗುಣವಾಗಿ ವ್ಯಾಕ್ಸಿನ್‌ ಒದಗಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಅ. 05ರಂದು ಆದೇಶ ಹೊರಡಿಸಿದ್ದರು. ಕೆಲವು ಸರಕಾರಿ ಆಸ್ಪತ್ರೆಗಳು ಈ ಆದೇಶನ್ನು ಪರಿಗಣಿಸಿದ್ದರೆ ಬಹುತೇಕ ಆಸ್ಪತ್ರೆಗಳು ವ್ಯಾಕ್ಸಿನ್‌ ನೀಡಲು ಇನ್ನೂ ಶುಲ್ಕ ಪಡೆಯುತ್ತಿರುವುದು ಕಂಡುಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.

Also Read  2018-19 ನೇ ಸಾಲಿನಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಧಾನಪರಿಷತ್ ಸದಸ್ಯರ ಅನುದಾನ ಬಿಡುಗಡೆ

error: Content is protected !!
Scroll to Top