ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ – ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಹಲವು ಉದ್ಯೋಗಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 15. ಕರ್ನಾಟಕ ಅರಣ್ಯ ಇಲಾಖೆಯಲ್ಲಿನ ವಿವಿಧ ವೃತ್ತಗಳ ಹಂತದಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.


ಹುದ್ದೆಯ ವಿವರ ಈ ಕೆಳಗಿನಂತಿದೆ:-
ಕರ್ನಾಟಕ ಅರಣ್ಯ ಇಲಾಖೆಯಲ್ಲಿ 310 ಹುದ್ದೆಗಳು.
ಬೆಂಗಳೂರಿನಲ್ಲಿ 33, ಬೆಳಗಾವಿ 20, ಬಳ್ಳಾರಿ 20, ಚಾಮರಾಜನಗರ 32, ಚಿಕ್ಕಮಗಳೂರು 25, ಧಾರವಾಡ 7, ಹಾಸನ 20, ಕೆನರಾ ವೃತ್ತ 32, ಕೊಡಗು 16, ಕಲಬುರಗಿ 23, ಮಂಗಳೂರು 20, ಮೈಸೂರು 32, ಶಿವಮೊಗ್ಗೆ 30 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ- ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ- ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವೈದಕೀಯ ತಪಾಸಣೆಯ ಮೂಲಕ ಆಯ್ಕೆ ನಡೆಸಲಾಗುವುದು.
ಅರ್ಜಿ ಸಲ್ಲಿಕೆ- ಈ ಹುದ್ದೆಗೆ ಸೆಪ್ಟೆಂಬರ್​ 27ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 26. ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ ಅಕ್ಟೋಬರ್ 31. ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿಗೆ ವೆಬ್ ಸೈಟ್ ಲಿಂಕ್‌ https://kfdrecruitment.in
ಅರ್ಜಿ ಶುಲ್ಕ ರೂ. 200.
ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100.
ಚಲನ್‌ ಡೌನ್‌ಲೋಡ್ ಮಾಡಿಕೊಂಡು ಇ-ಪಾವತಿ ಸೌಲಭ್ಯ ಇರುವ ಅಂಚೆಗಳಲ್ಲಿ ಶುಲ್ಕ ಪಾವತಿಸಬೇಕು.
ವಯಸ್ಸಿನ ಮಿತಿ- ಕನಿಷ್ಠ 18 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ. ಇತರೆ ಹಿಂದುಳಿದ ವರ್ಗದವರಿಗೆ 32 ವರ್ಷ ಗರಿಷ್ಠ ವಯೋಮಿತಿ.
ಎಸ್‌ಸಿ /ಎಸ್‌ಟಿ ಅಭ್ಯರ್ಥಿಗಳಿಗೆ 33 ವರ್ಷ ಗರಿಷ್ಠ ವಯೋಮಿತಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Also Read  ಬೆಂಗಳೂರು- ಮಾರಿಕುಪ್ಪಂ ರೈಲಿನಲ್ಲಿ ಬೆಂಕಿ

error: Content is protected !!
Scroll to Top