ಕ್ರಿಸ್ಟಿಯಾನೊ ರೊನಾಲ್ಡೊಗೆ 99 ಛಡಿ ಏಟಿನ ಶಿಕ್ಷೆ..?

(ನ್ಯೂಸ್ ಕಡಬ) newskadaba.com ಟೆಹ್ರನ್, ಅ. 14. ಬ್ರಿಜಿಲ್‍ನ ಖ್ಯಾತ ಪುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಇರಾನ್‍ಗೆ ಭೇಟಿ ನೀಡಿದ ಸಂದರ್ಭ ವಿಕಲಚೇತನ ಅಭಿಮಾನಿಯೊಬ್ಬಳಿಗೆ ಸಹಿ ಮಾಡಿದ ಶರ್ಟ್ ನೀಡಿ ತಬ್ಬಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾರೆ ಎಂಬ ಆರೋಪದಡಿ ಇರಾನ್ ನ ನ್ಯಾಯಾಲಯವು 99 ಛಡಿ ಏಟಿನ ಶಿಕ್ಷೆಯನ್ನು ವಿಧಿಸಿರುವುದಾಗಿ ಮೀಡಿಯಾವೊಂದು ವರದಿ ಮಾಡಿದೆ.

ಇರಾನಿನ ಮಾಧ್ಯಮಗಗಳ ಪ್ರಕಾರ ಕಳೆದ ಸೆಪ್ಟೆಂಬರ್ ನಲ್ಲಿ ಏಷ್ಯನ್ ಚಾಂಪಿಯನ್ಸ್ ಲೀಗ್‍ನಲ್ಲಿ ಆಡಲು ತನ್ನ ತಂಡದೊಂದಿಗೆ ಟೆಹ್ರಾನ್‍ಗೆ ಪ್ರಯಾಣಿಸಿದಾಗ ಈ ಘಟನೆ ನಡೆದಿದೆ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿದ ಇರಾನಿನ ನ್ಯಾಯಾಂಗ ವ್ಯವಸ್ಥೆಯು ಅವನಿಗೆ ಶಿಕ್ಷೆಯನ್ನು ವಿಧಿಸಿದೆ ಎಂದು ವರದಿ ಮಾಡಿದೆ.

Also Read  ಪಿಎಂ ಸೂರ್ಯಘರ್ ಯೋಜನೆ ಕುಟುಂಬಗಳನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿಸುತ್ತದೆ ; ಸಂಸದ ಕ್ಯಾ.ಚೌಟ

ಭೇಟಿಯ ಸಂದರ್ಭ ರೊನಾಲ್ಡೋ ಪಾರ್ಶ್ವವಾಯುವಿಗೆ ಒಳಗಾಗಿದ್ದ ಪುಟ್‍ಬಾಲ್ ಅಭಿಮಾನಿ ಫತೇಮೆ ಹಮಾಮಿ ಎಂಬಾಕೆಗೆ ಸಹಿ ಮಾಡಿದ ಶರ್ಟ್, ಅಪ್ಪುಗೆ ಮತ್ತು ಕೆನ್ನೆಗೆ ಮುತ್ತು ನೀಡಿದ್ದರು. ಮಾನವೀಯತೆಗೆ ಬೆಲೆ ಇಲ್ಲದೆ ಈ ಶಿಕ್ಷೆ ವಿಧಿಸಿರುವುದು ದುರಾದೃಷ್ಟಕರ ಎಂದು ವಿಶ್ವದಾದ್ಯಂತ ಅಭಿಮಾನಿಗಳು ಕಿಡಿಕಾರಿದ್ದಾರೆ.

error: Content is protected !!
Scroll to Top