ಅತಿಯಾದ ಮೊಬೈಲ್ ಬಳಕೆ – ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 14. ಅತಿಯಾದ ಮೊಬೈಲ್‌ ಬಳಕೆ ಮಾಡುತ್ತಿದ್ದ ಮಗನನ್ನು ಪ್ರಶ್ನಿಸಿದ ತಾಯಿಗೆ ಮಗನೇ ಭೀಕರವಾಗಿ ಹಲ್ಲೆ ನಡೆಸಿದ್ದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮೃತ‍‍ಪಟ್ಟ ಘಟನೆ ಕಾಸರಗೋಡಿನಿಂದ ವರದಿಯಾಗಿದೆ.


ಮೃತರನ್ನು ಜಿಲ್ಲೆಯ ಕಣಿಚಿರ ಪ್ರದೇಶದ ರುಕ್ಮಿಣಿ ಎಂದು ಗುರುತಿಸಲಾಗಿದೆ. ಇವರು ಮಗನಿಂದ ಹಲ್ಲೆಗೆ ಒಳಗಾಗಿದ್ದ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೊಬೈಲ್ ನ ಅತಿಯಾದ ಬಳಕೆಯನ್ನು ಪ್ರಶ್ನಿಸಿದಕ್ಕೆ ಮಗ ಸುಜಿತ್, ತಾಯಿ ರುಕ್ಮಣಿ ಅವರ ತಲೆಯನ್ನು ಗೋಡೆಗೆ ಬಡಿದು ಗಾಯಗೊಳಿಸಿದ್ದ. ಪ್ರಕರಣ ನಡೆದ ಕೂಡಲೇ ಆತನ ಬಂಧನವೂ ಆಗಿತ್ತು. ‌ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಕೋಯಿಕ್ಕೋಡ್‌ನ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read   4.50 ಕೋಟಿ ರೂ. ಮೌಲ್ಯದ ಸೀರೆ, 1.40 ಕೋಟಿ ರೂ. ಹಣ, 56 ಲೀ. ಬಿಯರ್ ವಶ

error: Content is protected !!
Scroll to Top