ಗಾಂಧಿ ಪುರಸ್ಕಾರವಾದ ಕೊಯಿಲ ಗ್ರಾಮದಲ್ಲಿ ಅಭಿವೃದ್ಧಿಯಾಗದೇ ಇರುವುದು ಖೇದಕರ – ಮುನೀರ್ ಆತೂರು

(ನ್ಯೂಸ್ ಕಡಬ) newskadaba.com ಆತೂರು, ಅ. 13. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗು ಕಡಬ ತಾಲೂಕಿನ ಗಡಿಭಾಗವಾದ ಕೊಯಿಲ ಪ್ರದೇಶ ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗದಿರುವುದು ಖೇದಕರ ಎಂದು ಮುನೀರ್ ಆತೂರು ವ್ಯಕ್ತಪಡಿಸಿದರು.

ಕೊಯಿಲವು ಗಾಂಧಿ ಪುರಸ್ಕಾರವಾದರೂ ರಸ್ತೆ ಹಾಗೂ ದಾರಿದೀಪ ವಿಷಯದಲ್ಲಿ ಅಭಿವೃದ್ಧಿಯಾಗಿಲ್ಲ. ಕೇವಲ ಒಂದು ವಿಷಯದಲ್ಲಿ ಅಭಿವೃದ್ಧಿಯಾದರೆ ಸರಕಾರದಿಂದ ಗಾಂಧಿ ಪುರಸ್ಕಾರ ನೀಡಲಾಗುವುದೆಂದು ಅನಿಸುತ್ತದೆ. ಕೊಯಿಲ ಗ್ರಾಮದಲ್ಲಿ 5 ವಾರ್ಡ್ ಗಳಿದ್ದು, 5 ವಾರ್ಡ್ ನಲ್ಲಿ ಮಸೀದಿ, ದೇವಸ್ಥಾನ, ಶಾಲೆ, ಅಂಗನವಾಡಿ ಹಾಗೂ ಮದರಸಗಳಿದ್ದು ಕೆಲವೊಂದು ಸ್ಥಳದಲ್ಲಿ ಅಭಿವೃದ್ಧಿಯಾಗದಿರುವುದು ಬೇಸರ ಎನಿಸುತ್ತದೆ. SC ಹಾಗು ST ವಾಸವಿರುವ ಪ್ರದೇಶದಲ್ಲಿ ಅಭಿವೃದ್ಧಿಯಾಗದಿರುವುದು ಎದ್ದು ಕಾಣುತ್ತಿದೆ. ಕೊಯಿಲ ಗ್ರಾಮದಲ್ಲಿ ಆತೂರು ಪೇಟೆ-ಹುಸೈನ್ ನಗರ-ಎಲ್ಯoಗ-ಆತೂರು ಶ್ರೀ ಸದಾಶಿವ ದೇವಸ್ಥಾನ ಸಂಪರ್ಕಿಸುವ ರಸ್ತೆಯಿದ್ದು, ಈ ಪೈಕಿ ಆತೂರು ಶ್ರೀ ಸದಾಶಿವ ದೇವಸ್ಥಾನದಿಂದ ಎಲ್ಯoಗದವರೆಗೂ ಕಾಂಕ್ರೀಟ್ ರಸ್ತೆಯಾಗಿರುತ್ತದೆ. ಎಲ್ಯoಗ ದಿಂದ ಆತೂರು ಪೇಟೆಯವರೆಗೆ ಸರಿಯಾದ ರಸ್ತೆಯಿಲ್ಲ. ಆತೂರು ಪೇಟೆ ಯಿಂದ 250 ಮೀಟರ್ ಟಾರು ರಸ್ತೆಯಾಗಿದ್ದು, ಅದೂ ಕಿತ್ತು ಹೋಗಿದ್ದರಿಂದ ವಾಹನ ಸವರರಿಗೆ ಸಂಚರಿಸಲು ಕಷ್ಟವಾಗುತ್ತದೆ. ಹುಸೈನ್ ನಗರದಲ್ಲಿ 50 ಮೀಟರ್ ನಷ್ಟು ಕಾಂಕ್ರೀಟ್ ರಸ್ತೆ ಅಭಿವೃದ್ದಿಯಾಗಿದೆ. ಉಳಿದ ಸ್ಥಳದಲ್ಲಿ ಟಾರು ಅಥವಾ ಕಾಂಕ್ರೀಟ್ ರಸ್ತೆ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಹೋಗಲು ಜನರು ಪರದಾಡುತ್ತಾರೆ. ಮಳೆಗಾಲದಲ್ಲಿ ಕೆಲವು ಸ್ಥಳದಲ್ಲಿ ರಸ್ತೆಯು ಕೆಸರು ತುಂಬಿದ ಹೊಂಡದಂತಿರುತ್ತದೆ. ಈ ರಸ್ತೆಯನ್ನು ಶಾಲಾ ವಿದ್ಯಾರ್ಥಿಗಳು, ವಾಹನಗಳು ಹಾಗೂ ದಿನನಿತ್ಯ ಜನರು ಕೆಲಸಕ್ಕೆ ಹೋಗಲು ಅವಲಂಬಿಸುತ್ತಿದ್ದಾರೆ. ಅದು ಅಲ್ಲದೆ 50 ರಷ್ಟು ಅಲ್ಪಸಂಖ್ಯಾತ ಮನೆಗಳಿದ್ದು ಮತ್ತು 1 ಮಸೀದಿ ಇದೆ. ಈ ರಸ್ತೆಯು ಆತೂರು ಶ್ರೀ ಸದಾಶಿವ ದೇವಸ್ಥಾನ ಹಾಗು ಮುಹ್ಯುದ್ದೀನ್ ಜುಮಾ ಮಸೀದಿ ಆತೂರಿಗೆ ಪ್ರಮುಖ ರಸ್ತೆ ಸಂಪರ್ಕವಾಗಿದೆ.

Also Read  ವಿದ್ಯುತ್ ಸ್ಥಾವರದಲ್ಲಿ ಉದ್ಯೋಗ ಭರವಸೆ ನೀಡಿ ವಂಚನೆ ➤ ಕಿಲಾಡಿ ವಂಚಕ ಪೊಲೀಸ್ ಬಲೆಗೆ

ಶಾಸಕರಿಗೆ, ಅಲ್ಪಸಂಖ್ಯಾತ ಇಲಾಖೆಗೆ ಹಾಗೂ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಂತೂ ಇಂತೂ ಹಲವಾರು ವರ್ಷಗಳಿಂದ ಜನರು ಹಾಗು ವಿದ್ಯಾರ್ಥಿಗಳು ಸಮರ್ಪಕವಾದ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ಪಂಚಾಯತ್ ಬಳಿಯಿರುವ ಕೊಲೋನಿಯಲ್ಲಿ ರಸ್ತೆ ನಿರ್ಮಾಣವಾಗಿರುವುದಿಲ್ಲ. ರಸ್ತೆ ಬಿಡಿ ಸರಿಯಾದ ದಾರಿ ದೀಪವಿಲ್ಲ. ಅಭಿವೃದ್ಧಿಯಲ್ಲಿ ಆಡಳಿತ ಹಾಗು ವಿರೋಧ ಪಕ್ಷದವರ ತಾರತಮ್ಯ ಎತ್ತಿ ಕಾಣುತ್ತದೆ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಮುನೀರ್ ಆತೂರು ಆಗ್ರಹಿಸಿದ್ದಾರೆ.

Also Read  ಆತ್ಮಹತ್ಯೆಗೈಯ್ಯಲು ಮಂಗಳೂರಿನಿಂದ ಉಡುಪಿಗೆ ತೆರಳಿದ ವ್ಯಕ್ತಿ..!? ➤ ಸಮಾಸೇವಕರಿಂದ ರಕ್ಷಣೆ

error: Content is protected !!
Scroll to Top