ಬೆಳ್ಳಾರೆ: ಉದ್ಯೋಗದ ಆಮಿಷ- 13 ಲಕ್ಷ ರೂ.ವಂಚನೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 13. ವಿಮಾನಯಾನ ಸಂಸ್ಥೆಯೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಯೋರ್ವ 13 ಲಕ್ಷ ರೂ. ವಂಚಿಸಿದ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೂರಿನ ಪ್ರಕಾರ ‘ದೂರುದಾರ ವ್ಯಕ್ತಿಗೆ ಜುಲೈ 15ರಂದು ಅಪರಿಚಿತ ವ್ಯಕ್ತಿಯೋರ್ವ ಕರೆಮಾಡಿ, ವಿಮಾನಯಾನ ಸಂಸ್ಥೆಯಿಂದ ಕರೆ ಮಾಡಿರುವುದಾಗಿ ಹೇಳಿ, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿ ಇದ್ದು, ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ಇರಲಿವೆ ಎಂದು ತಿಳಿಸಿದ್ದರು. ಉದ್ಯೋಗವನ್ನು ಕೊಡಿಸುವುದಾಗಿ ನಂಬಿಸಿದ ಅಪರಿಚಿತ, ಹಂತ ಹಂತವಾಗಿ 13 ಲಕ್ಷ ರೂ. ಮೊತ್ತವನ್ನು ಪಡೆದಿದ್ದನು. ಅತ್ತ ಉದ್ಯೋಗವನ್ನೂ ನೀಡದೇ ಇತ್ತ ಹಣವನ್ನೂ ಮರಳಿಸದೇ ವಂಚನೆ ಮಾಡಿದ್ದಾರೆ ಎಂದು ಅಮರಪಡ್ನೂರು ಗ್ರಾಮದ ನಿವಾಸಿಯೋರ್ವರು ದೂರು ನೀಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Also Read  ಬಂಟ್ವಾಳ: ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ

error: Content is protected !!
Scroll to Top