ದಕ್ಷಿಣ ಕನ್ನಡದಲ್ಲಿ ಇನ್ಮುಂದೆ ಆನ್‌ಲೈನ್‌ನಲ್ಲಿ ಪ್ರಥಮ ಪಿಯುಸಿ ಫಲಿತಾಂಶ ► ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದಿಂದ ನೂತನ ಪ್ರಯೋಗ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.09. ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘವು ಪ್ರಥಮ ಪಿಯುಸಿ ಫಲಿತಾಂಶಗಳ ಪ್ರಕಟನೆಗೆ ಏಕರೂಪದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ನಗರದ ಸರೋಜಿನಿ ಮಧುಸೂದನ ಕುಶೆ ಶಿಕ್ಷಣ ಸಂಸ್ಥೆಗಳ ಕಟ್ಟಡದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಯಿತು.

 

ರಾಜ್ಯದಲ್ಲಿಯೇ ಇದು ವಿನೂತನ ಪ್ರಯೋಗವಾಗಿದ್ದು, ಪ್ರಥಮ ಪಿಯುಸಿ ಫಲಿತಾಂಶ ಏಕರೂಪದಲ್ಲಿ, ಏಕಕಾಲದಲ್ಲಿ ‘ಸುವಿದ್ಯಾ’ ಪೋರ್ಟಲ್ ಮೂಲಕ ಆನ್‌ಲೈನ್‌ ನಲ್ಲಿ ಈ ಸಾಲಿನಿಂದ ಫಲಿತಾಂಶ ಲಭ್ಯವಾಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಈ ಆನ್‌ಲೈನ್ ಫಲಿತಾಂಶ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ದಕ್ಷಿಣ ಕನ್ನಡ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ವೆಬ್‌ಸೈಟ್ ನಲ್ಲಿ (www.dkpucpa.com) ಫಲಿತಾಂಶಕ್ಕಾಗಿ ಲಿಂಕ್ ಒದಗಿಸಲಿದ್ದು, ಅಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ತಮ್ಮ ಫಲಿತಾಂಶವನ್ನು ತಿಳಿಯಬಹುದಾಗಿದೆ. ಪ್ರಥಮ ಪಿಯುಸಿ ಫಲಿತಾಂಶದಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತರುವ ದೃಷ್ಟಿಯಲ್ಲಿ ಕೇಂದ್ರೀಕೃತ ನಿಯಂತ್ರಣದೊಂದಿಗೆ ಸ್ವಯಂ ಚಾಲಿತವಾಗಿ ಫಲಿತಾಂಶ ಪಟ್ಟಿ ಹಾಗೂ ಸಂಬಂಧಪಟ್ಟ ಅಂಕಿಅಂಶಗಳು ಮತ್ತು ಅಗತ್ಯ ಅನುಬಂಧಗಳನ್ನು ತಯಾರಿಸುವ ಮತ್ತು ಮುದ್ರಿಸುವ ಸೌಲಭ್ಯವನ್ನು ಈ ವ್ಯವಸ್ಥೆ ಒದಗಿಸಲಿದೆ.

Also Read  ಮಂಗಳೂರು: ಕರಾವಳಿ ಭದ್ರತೆ ಹೆಚ್ಚಿಸಲು ಇನ್ನೆರಡು ರಾಡಾರ್‌ ಸ್ಥಾಪನೆ..! ➤  ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 198 ಪದವಿ ಪೂರ್ವ ಕಾಲೇಜುಗಳಿದ್ದು, ಅವುಗಳಲ್ಲಿ 53 ಸರಕಾರಿ ಹಾಗೂ 42 ಅನುದಾನಿತ ಕಾಲೇಜುಗಳಾಗಿವೆ. ವಿದ್ಯಾರ್ಥಿಗಳ ಮಾಹಿತಿಯನ್ನು ಸಮಗ್ರವಾಗಿ ಕ್ರೋಢೀಕರಿಸಿ ಗೌಪ್ಯತೆಯನ್ನು ಕಾಪಾಡುವುದು, ಉಪನಿರ್ದೇಶಕರ ಮೇಲ್ವಿಚಾರಣೆಗೆ ಒಳಪಟ್ಟು ಕೇಂದ್ರೀಕೃತ ಸಂಪೂರ್ಣ ನಿಯಂತ್ರಣ ವ್ಯವಸ್ಥೆ, ವಿದ್ಯಾರ್ಥಿಗಳ ಅಂಕಗಳು ಸುಲಭ ಹಾಗೂ ಶೀಘ್ರದಲ್ಲಿ ಅಳವಡಿಸಲು ಅವಕಾಶ, ನೋಡಲ್ ಕೇಂದ್ರ ಮತ್ತು ಉಪ ನಿರ್ದೇಶಕರಿಂದ ಸುಲಭ ಹಾಗೂ ಶೀಘ್ರ ಅನುಮೋದನೆಗೆ ಅವಕಾಶ, ವಿಭಾಗವಾರು, ಸಂಯೋಜನೆವಾರು, ಭಾಷಾವಾರು, ಲಿಂಗಾವಾರು, ವರ್ಗವಾರು, ಅಂಕಿಅಂಶಗಳನ್ನು ಪಡೆಯಲು ಹಾಗೂ ಮುದ್ರಿಸಲು ಅವಕಾಶ, ಎ3 ಸೈಝ್‌ನಲ್ಲಿ ಮುದ್ರಣ ಮಾಡಲು ಅವಕಾಶವಿರದ ಕಾಲೇಜಿನವರು ಯಾವುದೇ ಸೈಬರ್ ಸೆಂಟರ್‌ಗಳು ಅಥವಾ ಜೆರಾಕ್ಸ್ ಸೆಂಟರ್‌ಗಳಿಗೆ ಹೋಗದೆ ಉಪನಿರ್ದೇಶಕರ ಕಚೇರಿಯಲ್ಲಿ ಅನುಮೋದಿಸಿದ ಫಲಿತಾಂಶ ಪಟ್ಟಿಯನ್ನು ಪಡೆಯಲು ಅವಕಾಶ, ಸ್ವಯಂಚಾಲಿತ ಪ್ರವೇಶ ಪತ್ರ, ಅಂಕಪಟ್ಟಿ ಮತ್ತು ಫಲಿತಾಂಶ ಅನುಮೋದನೆಗೆ ಬೇಕಾದ ಎಲ್ಲಾ ಅನುಬಂಧಗಳು ಫಲಿತಾಂಶ ಪಟ್ಟಿ ಮುದ್ರಿಸಲು ಅವಕಾಶ, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ತಿಳಿದು ತಾತ್ಕಾಲಿಕ ಅಂಕಪಟ್ಟಿ ಪಡೆಯಲು ಅವಕಾಶವನ್ನು ಈ ನೂತನ ತಂತ್ರಜ್ಞಾನ ಒದಗಿಸಲಿದೆ.

Also Read  ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!

error: Content is protected !!
Scroll to Top