ಚಲಿಸುವ ಬಸ್ ನಿಂದ ಬಿದ್ದು ಯುವಕನಿಗೆ ಗಾಯ

(ನ್ಯೂಸ್ ಕಡಬ) newskadaba.com ‌ಮಂಗಳೂರು, ಅ. 12. ಚಲಿಸುತ್ತಿದ್ದ ಬಸ್‌ನಿಂದ ಹೊರಗೆ ಬಿದ್ದ ಪರಿಣಾಮ ಯುವಕ ಗಾಯಗೊಂಡ ಕುರಿತು ಕದ್ರಿ ಸಂಚಾರ ಪೂರ್ವ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.


ಕೂಳೂರಿಗೆ ಹೋಗಲೆಂದು ಶಿವಭಾಗ್ ಬಸ್‌ ನಿಲ್ದಾಣದ ಬಳಿ ಮಾರ್ಗ ಸಂಖ್ಯೆ 15ರ ಬಸ್‌ಗೆ ಕಾಯುತ್ತಿದ್ದ ಯುವಕನೋರ್ವ ಹಿಂಬಾಗಿಲಿನ ಮೂಲಕ ಬಸ್ ಹತ್ತಿದ್ದನು. ಅಷ್ಟರಲ್ಲೇ ಚಾಲಕ ಏಕಾಏಕಿ ಬಸ್‌ ಚಲಾಯಿಸಿದ ಪರಿಣಾಮ ಪ್ರಯಾಣಿಕರು ಏಕಾಏಕಿ ಹಿಂದಕ್ಕೆ ವಾಲಿದ್ದರಿಂದ ಯುವಕ ಆಯತಪ್ಪಿ ಬಸ್‌ನಿಂದ ಕೆಳಗೆ ಬಿದ್ದು, ಎರಡು ಕೈಗಳು ಹಾಗೂ ಸೊಂಟಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಸಂತ್ರಸ್ತ ಯುವಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಘಟನೆಯ ಕುರಿತು ಬಸ್‌ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಯುವಕ ಕೀರ್ತನ್ ಅಶೀರ್ ಸಿಕ್ವೇರ ಅವರು ದೂರು ನೀಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Also Read  ಮಂಗಳೂರಿನ ಪೆಟ್ರೋಲ್‌‌ ಬಂಕ್‌ಗಳಲ್ಲಿ ಕಳ್ಳತನ ➤ 6 ಮಂದಿ ಪೊಲೀಸರ ವಶಕ್ಕೆ

error: Content is protected !!
Scroll to Top