ದಕ್ಷಿಣ ಕನ್ನಡ: ಕಾರು ಹರಿದು ಸ್ಕೂಟರ್ ಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 12. ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯಿಂದ ಹೊರಬರುತ್ತಿದ್ದ ದ್ವಿಚಕ್ರ ವಾಹನ‌ ಸವಾರನ ಮೇಲೆ ಕಾರು ಹರಿದ ಪರಿಣಾಮ ಯುವಕ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಮೃತ ಯುವಕನನ್ನು ಕಾವೂರು ನಿವಾಸಿ ಕೌಶಿಕ್ (21) ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯ ಆವರಣದಿಂದ ಹೊರ ಬರುತ್ತಿದ್ದಂತೆ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಆಟೋ ರಿಕ್ಷಾಕ್ಕೆ ತಗುಲಿದೆ. ಈ ವೇಳೆ‌ ನೆಲಕ್ಕೆ ಬಿದ್ದ ಅವರ ಮೇಲೆ ಸ್ವಿಫ್ಟ್ ಕಾರು ಹರಿದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Also Read  ಅಡ್ಯನಡ್ಕ: ಜನತಾ ಪ್ರೌಢಶಾಲೆಯಲ್ಲಿ 'ವಿಶ್ವ ಯೋಗ ದಿನಾಚರಣೆ'

error: Content is protected !!
Scroll to Top